ವಿವಿಪ್ಯಾಟ್ ತಾಳೆ ಹೆಚ್ಚಾದರೆ...

ಗುರುವಾರ , ಜೂನ್ 27, 2019
29 °C

ವಿವಿಪ್ಯಾಟ್ ತಾಳೆ ಹೆಚ್ಚಾದರೆ...

Published:
Updated:

ಲೋಕಸಭಾ ಚುನಾವಣೆಯ ಶೇಕಡ 50ರಷ್ಟು ವಿವಿಪ್ಯಾಟ್‌ಗಳನ್ನು ಮತಯಂತ್ರಗಳ ಜೊತೆ ತಾಳೆ ಮಾಡಬೇಕೆಂದು ಕೋರ್ಟನ್ನು ಕೋರಲಾಗಿತ್ತು. ಆದರೆ ಕೋರ್ಟ್ ಒಪ್ಪದೆ ಶೇ 2ರಷ್ಟನ್ನು ಮಾತ್ರ ತಾಳೆ ಮಾಡಲು ಅನುಮತಿಸಿದೆ. ಇದರಿಂದ ಫಲಿತಾಂಶ ಪ್ರಕಟಣೆ 4 ತಾಸುಗಳಷ್ಟು ವಿಳಂಬವಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ. ಅದೇ ಶೇ 50ರಷ್ಟು ವಿವಿಪ್ಯಾಟ್‌ಗಳನ್ನು ತಾಳೆ ಮಾಡಲು ಹೊರಟರೆ 300 ತಾಸುಗಳಷ್ಟು (ಸುಮಾರು 12 ದಿನ) ಫಲಿತಾಂಶ ವಿಳಂಬವಾಗುತ್ತದೆ. ಇದರಿಂದ ಚುನಾವಣಾ ಅಧಿಕಾರಿಗಳ ಮಾನಸಿಕತೆ, ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳು ಏನಾಗಬೇಡ?

ಇಂಡೊನೇಷ್ಯಾದಲ್ಲಿ ಇತ್ತೀಚೆಗೆ ಲಕ್ಷಾಂತರ ಮತಪತ್ರಗಳನ್ನು ಎಣಿಸಲು ದೀರ್ಘಾವಧಿ ಕಾರ್ಯ ನಿರ್ವಹಿಸಿದ ಪರಿಣಾಮವಾಗಿ 270 ಸಿಬ್ಬಂದಿ  ಸಾವಿಗೀಡಾದರು. ಅಮೆರಿಕದಂಥ ದೇಶವೇ ಫಲಿತಾಂಶ ವಿಳಂಬವಾಗುತ್ತದೆ ಎಂಬ ಕಾರಣದಿಂದ ಶೇಕಡ 10ರಷ್ಟು ಮತಗಳನ್ನು ಮಾತ್ರ ತಾಳೆ ಮಾಡುತ್ತದೆ. ಇನ್ನು ಶೇ 50ರಷ್ಟು ತಾಳೆ ಮಾಡುವುದೆಂದರೆ, ನಮ್ಮಂಥ ದೇಶಕ್ಕೆ ಹೆಚ್ಚಿನ ಹೊರೆಯೇ ಸರಿ. ಹೀಗಾಗಿ ಈ ಯೋಚನೆ ಕೈಬಿಟ್ಟು, ವಿವಿಪ್ಯಾಟ್ ಮತ್ತು ಇವಿಎಂಗಳ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಕುರಿತು ವಿಚಾರ ಮಾಡುವುದು ಒಳಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !