ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಶ್ರೇಷ್ಠತೆ ಹಾಗೂ ಶೋಷಣೆ

Last Updated 7 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

‘ಬಿ.ಎಸ್‌. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ಹಲವು ಕ್ರಿಮಿನಲ್‌ ಪ್ರಕರಣಗಳ ತನಿಖೆ ಇನ್ನೂ ಬಾಕಿ ಇದೆ’ (ಪ್ರ.ವಾ., ಡಿ.5) ಎಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿರುವ ಸುದ್ದಿಯನ್ನು ಓದಿ, ಸಮಾಜದ ಒಳಿತಿನ ಬಗ್ಗೆ ಭರವಸೆ ಮೂಡುವುದರ ಜೊತೆಗೆ ಭಯವೂ ಉಂಟಾಯಿತು.

ಭರವಸೆ ಯಾಕೆಂದರೆ, ಅವರ ಮೇಲಿನ ಆರೋಪಗಳು ಸಾಬೀತಾದರೆ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎನ್ನುವ ಕಾರಣಕ್ಕೆ. ಭಯ ಮತ್ತು ಆತಂಕಏಕೆಂದರೆ, ನಮ್ಮ ಶ್ರೇಷ್ಠ ಸಂವಿಧಾನದ ಶೋಷಣೆಯು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಈ ಪ್ರಕರಣದಲ್ಲೂಹಾಗೆಯೇ ಆಗಬಹುದೇ ಎಂಬ ಕಾರಣಕ್ಕೆ.

ದೇಶದಲ್ಲಿ ಅನೇಕ ರಾಜಕಾರಣಿಗಳ ವಿರುದ್ಧ ಗುರುತರವಾದ ಆರೋಪಗಳಿದ್ದರೂ ಅವರೆಲ್ಲರೂ ಯಾವ ಅಳಕು, ಅಂಜಿಕೆಗಳಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ತೀರ್ಪುಗಳು ಬೇಗ ಪ್ರಕಟವಾಗಿ, ಭ್ರಷ್ಟ ರಾಜಕಾರಣಿಗಳಲ್ಲಿ ಅರ್ಧದಷ್ಟು ಜನರಿಗಾದರೂ ಶಿಕ್ಷೆ ಆಗಿದ್ದಿದ್ದರೆ ನಮ್ಮ ರಾಜಕೀಯ ಸ್ಥಿತಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಆರೋಪಿ ರಾಜಕಾರಣಿಗಳೆಲ್ಲರೂ ಸಂವಿಧಾನದತ್ತವಾದ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ದುರದೃಷ್ಟಕರ ಸಂಗತಿ.

–ಸಿದ್ರಾಮಪ್ಪ ದಿನ್ನಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT