ಶುಕ್ರವಾರ, ಅಕ್ಟೋಬರ್ 18, 2019
20 °C

ವಿತರಣೆ ಸಮರ್ಪಕವಾಗಲಿ

Published:
Updated:

ಕೇಂದ್ರ ಸರ್ಕಾರವು ರಾಜ್ಯದ ನೆರೆ ಸಂತ್ರಸ್ತರಿಗಾಗಿ ಅಂತೂ ₹ 1200 ಕೋಟಿ ಮಧ್ಯಂತರ ಪರಿಹಾರ ನೀಡಿದೆ. ಬಿಡುಗಡೆಯಾದ ಹಣವನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗಿದೆ. ಸಂಸದರು, ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕಣ್ಗಾವಲಲ್ಲಿ ಪರಿಹಾರ ಕಾರ್ಯ ಕ್ರಮಬದ್ಧವಾಗಿ ನಡೆಯಬೇಕು.

ಸ್ವಲ್ಪ ಎಚ್ಚರ ತಪ್ಪಿದರೂ ಹಣ ದೋಚಲು ಮಧ್ಯವರ್ತಿಗಳು ಕಾದಿರುತ್ತಾರೆ. ಸೂಕ್ತ ಸಮಿತಿ ನೇಮಿಸಿ, ಅದರ ನಿಗಾದಲ್ಲಿ ಪರಿಹಾರ ವಿತರಣೆ ನಡೆಯುವಂತೆ ನೋಡಿಕೊಳ್ಳಬೇಕು.

-ಜ್ಯೋತಿ ಭದ್ರಶೆಟ್ಟಿ, ವಿಜಯಪುರ

Post Comments (+)