ಚಿಂತನೆ ಕ್ರಿಯೆಗೆ ಇಳಿಯಲಿ

7

ಚಿಂತನೆ ಕ್ರಿಯೆಗೆ ಇಳಿಯಲಿ

Published:
Updated:

ಚಾಮರಾಜನಗರ ಜಿಲ್ಲೆಯಲ್ಲಿ ರೈತರು ಸಂಬಾರ ಪದಾರ್ಥಗಳನ್ನು ಹಲವಾರು ವರ್ಷಗಳಿಂದ ಬೆಳೆಯುತ್ತಿದ್ದಾರೆ. ಅವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಶೈತ್ಯಾಗಾರಗಳಿಲ್ಲದ ಕಾರಣ ಆ ಪದಾರ್ಥಗಳನ್ನು ತಮಿಳುನಾಡಿಗೆ ಸಾಗಿಸುತ್ತಿದ್ದರು. 2010ರಲ್ಲಿ ನಾನು ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಟರ್‌ ಆಗಿದ್ದಾಗ ರೈತರ ಕಷ್ಟ ನನ್ನ  ಗಮನಕ್ಕೆ ಬಂತು. ಆಗ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಚಂದ್ರಕಾಂತ ಬೆಲ್ಲದ ಅವರಿಗೆ ಜಿಲ್ಲೆಯ ಈ ಸ್ಥಿತಿ ಬಗ್ಗೆ ತಿಳಿಸಿದೆ. ಸಂಬಾರ ಪದಾರ್ಥಗಳನ್ನು ಸಂಗ್ರಹಿಸಿಡಲು ಶೈತ್ಯಾಗಾರಗಳನ್ನು ಸ್ಥಾಪಿಸುವಂತೆ ಮನವಿಯನ್ನೂ ಸಲ್ಲಿಸಲಾಯಿತು.

ರೈತರ ಮನವಿಗೆ ಸ್ಪಂದಿಸಿದ ಅವರು, ರಾಜ್ಯ ಸರ್ಕಾರದ ಗಮನ ಸೆಳೆದರು. ಶೈತ್ಯಾಗಾರ ನಿರ್ಮಾಣಕ್ಕೆ ಸರ್ಕಾರ ಕ್ರಮ ಜರುಗಿಸಿತು. ಈಗ ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯಲ್ಲಿ ಫುಡ್ ಕೋರ್ಟ್‌ ಸ್ಥಾಪಿಸಲು ಚಿಂತನೆ ನಡೆಸಿರುವುದು ಸ್ವಾಗತಾರ್ಹ. ಈ ಚಿಂತನೆಯೂ ಬೇಗ ಕ್ರಿಯೆಗೆ ಇಳಿದರೆ ಜಿಲ್ಲೆಯ ಜನರಿಗೆ ಅನುಕೂಲ ಆಗುತ್ತದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !