ಅನುಕೂಲಗಳೂ ಇವೆ

7

ಅನುಕೂಲಗಳೂ ಇವೆ

Published:
Updated:

ಪ್ರತ್ಯೇಕ ರಾಜ್ಯದ ಬೇಡಿಕೆ ಮತ್ತೆ ಭುಗಿಲೆದ್ದಿದೆ. ಮೇಲ್ನೋಟಕ್ಕೆ ಈ ಬೇಡಿಕೆ ಅಸಬಂದ್ಧವಾದುದು, ಮೂರ್ಖತನದ್ದು ಎಂದು ಅನಿಸಿದರೂ ಪ್ರತ್ಯೇಕ ರಾಜ್ಯದಿಂದ ಅನುಕೂಲಗಳೂ ಇಲ್ಲದೇ ಇಲ್ಲ. ಅಧಿಕಾರ ವಿಕೇಂದ್ರೀಕರಣ ಆಗುತ್ತದೆ. ಆಡಳಿತ ಸುಗಮಗೊಳ್ಳುತ್ತದೆ. ಬೆಂಗಳೂರಿನಲ್ಲಿ ಜನದಟ್ಟಣೆ, ವಾಹನದಟ್ಟಣೆ, ಟ್ರಾಪಿಕ್ ಜಾಮ್‌ ಹಾವಳಿ ಸ್ವಲ್ಪಮಟ್ಟಿಗೆ ತಗ್ಗಬಹುದು.

ಅಷ್ಟೇ ಅಲ್ಲ, ರಾಜಧಾನಿಯಲ್ಲಿನ ವಾಯುಮಾಲಿನ್ಯ, ಕಸ ವಿಲೇವಾರಿ ಸಮಸ್ಯೆಯ ತೀವ್ರತೆಯೂ ಕಡಿಮೆ ಆಗಲಿದೆ. ಉತ್ತರ ಕರ್ನಾಟಕದವರು ಬೆಂಗಳೂರಿಗೆ ಅಲೆಯುವುದೂ ತಪ್ಪುತ್ತದೆ. ಹೇಗಿದ್ದರೂ ಬೆಳಗಾವಿಯಲ್ಲಿ ಸುವರ್ಣಸೌಧ ಸಿದ್ಧವಿದೆ. ಅಲ್ಲದೇ ಕೇಂದ್ರ ಸರ್ಕಾರದಿಂದ ಸಿಗುವ ಅನುದಾನ ಕೂಡ ಹೆಚ್ಚಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ಬೆಂಗಳೂರಿನ ನೀರಿನ ಬೇಡಿಕೆ ಶೇಕಡ 25ರಷ್ಟಾದರೂ ಕಡಿಮೆಯಾಗಲಿದೆ. ಇಂತಹ ಅಂಶಗಳ ನೆಲೆಯಲ್ಲಿಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಪರಿಭಾವಿಸಬೇಕಿದೆ.

ಬೆಂಗಳೂರು

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !