ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್‌ವರ್ಕ್‌ ಬೇಕು

Last Updated 5 ಜೂನ್ 2019, 17:26 IST
ಅಕ್ಷರ ಗಾತ್ರ

ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಹೋಂವರ್ಕ್‌ ಕೊಡಬಾರದೆಂದುಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ(ಪ್ರ.ವಾ., ಜೂನ್‌ 2).ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳಿಗೆ ವಿದ್ಯೆಯ ಮಹತ್ವ ತಿಳಿದಿರುವುದಿಲ್ಲ. ಅಕ್ಷರ ಕಲಿಯುವ ವಯಸ್ಸಿನಲ್ಲಿ ಆಟವನ್ನೇ ಪ್ರಧಾನ ಮಾಡಿಕೊಂಡು ಸಮಯ ವ್ಯಯ ಮಾಡುತ್ತಾರೆ. ಆದ್ದರಿಂದ ಶಿಕ್ಷಕರು ವಿಷಯವಾರು ವಿಂಗಡಣೆ ಮಾಡಿಕೊಂಡು, ದಿನಕ್ಕೆ ಎರಡು ಪುಟಗಳಷ್ಟು ಹೋಮ್‌ವರ್ಕ್‌ ಕೊಟ್ಟರೆ ಮಕ್ಕಳಿಗೆ ತೊಂದರೆಯಾಗುವುದಿಲ್ಲ. ಒಂದು ವೇಳೆ ಹೋಮ್‌ವರ್ಕ್‌ ಕೊಡದೇ ಹೋದರೆ ಅವರು ಕಲಿಕೆಯಲ್ಲಿ ಆಸಕ್ತಿ ತೋರುವುದಿಲ್ಲ. ಮುಂದಿನ ತರಗತಿಯ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತದೆ. ಕಲಿಕಾ ಮಟ್ಟ ಕಡಿಮೆಯಾಗುತ್ತದೆ. ಹೋಮ್‌ವರ್ಕ್‌ ಕೊಡುವುದರಿಂದ ಅಕ್ಷರಜ್ಞಾನ ಹೆಚ್ಚಾಗುವುದರ ಜೊತೆಗೆ ಬರವಣಿಗೆ ಸಹ ಸುಂದರವಾಗುತ್ತದೆ.

ಎಂ.ಎಸ್‌.ಉಷಾ ಪ್ರಕಾಶ್‌,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT