ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಆರ್‌ಎಂಎಸ್‌ ವ್ಯವಸ್ಥೆ: ಇನ್ನಷ್ಟು ನೌಕರಸ್ನೇಹಿ ಆಗಲಿ

Last Updated 8 ಸೆಪ್ಟೆಂಬರ್ 2020, 14:51 IST
ಅಕ್ಷರ ಗಾತ್ರ

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್‌) ಜಾರಿಗೆ ಬಂದಾಗಿನಿಂದ ಸರ್ಕಾರಿ ನೌಕರರಿಗೆ ಬಹಳಷ್ಟು ಅನುಕೂಲವಾಗಿದೆ. ವೇತನ ವಿಳಂಬವಾಗುವುದು ಇದರಿಂದ ಕಡಿಮೆಯಾಗಿದೆ. ಹಲವಾರು ಮಾಹಿತಿಗಳು ಶೀಘ್ರ ದೊರೆಯುತ್ತಿವೆ. ಆದರೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೌಕರಸ್ನೇಹಿ ಆದರೆ ಉತ್ತಮ.

ನೌಕರರಿಗೆ ಎಲ್ಲಾ ಮಾಹಿತಿ ಸುಲಭವಾಗಿ ನೋಡಲು ಅನುವಾಗಬೇಕು. ಹತ್ತು-ಹನ್ನೆರಡು ವರ್ಷಗಳ ಹಿಂದಿನ ಮಾಹಿತಿಯನ್ನೂ ಗಣಕೀಕರಣಗೊಳಿಸಿದರೆ ನಿವೃತ್ತರಾದವರಿಗೂ ಅನುಕೂಲ. ಈ ವಿಭಾಗಕ್ಕೆ ಸಂಬಂಧಿಸಿದಂತೆ ಒಂದು ದೂರು ನಿರ್ವಹಣಾ ವಿಭಾಗ ಸಹ ಇರಬೇಕು. ದೂರುಗಳಿಗೆ ನಿರ್ದಿಷ್ಟ ಅವಧಿಯಲ್ಲಿ ಪರಿಹಾರ
ದೊರಕಿಸಿಕೊಡಬೇಕು.

- ಎಸ್.ಆರ್.ಬಿರಾದಾರ,ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT