ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಖಾತೆಗಾಗಿ ಕ್ಯಾತೆ ಸರಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯನೇರ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ’ ಎಂಬ ಅಲ್ಲಮನ ವಾಣಿಯನ್ನು ಖಂಡಿತವಾಗಿಯೂ ನೆನಪಿಸುತ್ತದೆ ಖಾತೆಗಾಗಿ ಕ್ಯಾತೆ ತೆಗೆಯುತ್ತಿರುವ ಇಂದಿನ ಮಂತ್ರಿಗಳ ಹುಚ್ಚಾಟ.

ಕೊರೊನಾ ಸಂಕಷ್ಟದ ಈಗಿನ ಪರಿಸ್ಥಿತಿಯಲ್ಲಿ ಹಲವರು ಬದುಕಿನ ಬಗ್ಗೆಯೇ ಭರವಸೆ ಕಳೆದು ಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೊಟ್ಟ ಖಾತೆಯನ್ನು ನಿರ್ವಹಿಸದೆ ಇಂತಹುದೇ ಖಾತೆ ಬೇಕೆಂದು ಪಟ್ಟು ಹಿಡಿಯುವುದು ಎಷ್ಟು ಸರಿ? ಕೊಟ್ಟ ಖಾತೆ ಬೇಡವೆಂದವರ ಮಂತ್ರಿಗಿರಿ ರದ್ದುಪಡಿಸಿ ಹೊಸಬರಿಗೆ ಮಣೆ ಹಾಕಲು ಮುಖ್ಯಮಂತ್ರಿಗೆ ಇದೊಂದು ಸುವರ್ಣ ಅವಕಾಶ. ಅವರು ಈ ದಿಸೆಯಲ್ಲಿ ಕಾರ್ಯತತ್ಪರರಾದರೆ ಖಂಡಿತ ಅವರಿಗೆ ರಾಜ್ಯದ ಜನರ ಬೆಂಬಲ ಸಿಗಲಿದೆ.

ಪ್ರಕಾಶ್ ಮಲ್ಕಿ ಒಡೆಯರ್, ಹೂವಿನಹಡಗಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು