ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಬದ್ಧ ನಿಯಮ ಅಗತ್ಯವೇ?

Last Updated 4 ಫೆಬ್ರುವರಿ 2021, 16:12 IST
ಅಕ್ಷರ ಗಾತ್ರ

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಇದೇ 6ರಂದು ಮಡಿಕೇರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಂದು ಅಂಗಡಿ‌ ಮುಂಗಟ್ಟುಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಜನಸಂದಣಿ ಅಥವಾ ಭದ್ರತಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಈ ಸೂಚನೆ ಸರಿ ಎಂದುಕೊಳ್ಳೋಣ. ಆದರೆ ಅವರು ಸಂಚರಿಸುವ ದಾರಿಯಲ್ಲಿನ ಮನೆಗಳ ಮುಂಬಾಗಿಲುಗಳನ್ನೂ ಮುಚ್ಚಬೇಕು ಎಂದು ಆದೇಶಿಸಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಮೂಡಿದೆ.

ರಾಷ್ಟ್ರಪತಿಯವರ ಸುತ್ತಲೂ ಭದ್ರತಾಪಡೆ, ಪೊಲೀಸರು, ಜಿಲ್ಲಾ ಅಧಿಕಾರಿಗಳು, ಮಂತ್ರಿ ಮಹೋದಯರ ಹಿಂಡೇ ಇರುತ್ತದೆ. ಹೀಗಿದ್ದೂ ಸಲ್ಲದ ಆತಂಕ ಮತ್ತು ಭಯದ ವಾತಾವರಣವನ್ನು ಸರ್ಕಾರವೇ ಮೂಡಿಸಿದಂತೆ ಆಗುವುದಿಲ್ಲವೇ? ಇಂತಹ ಅಸಂಬದ್ಧ ನಿಯಮಗಳೇಕೆ ಇದ್ದಕ್ಕಿದ್ದಂತೆ ಉದ್ಭವಿಸುತ್ತವೆ? ಶಿಷ್ಟಾಚಾರದ ಹೆಸರಿನಲ್ಲಿ ಇಂತಹ ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದನ್ನು ಬಿಡಬೇಕು. ರಾಷ್ಟ್ರಪತಿಯವರನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಬೇಕು.

ಅಶ್ವತ್ಥ ಕಲ್ಲೇದೇವರಹಳ್ಳಿ, ಕುಂಕಾನಾಡು,ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT