ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ರಾಂತಿಧಾಮ ಆಗದಿರಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ

ಅಕ್ಷರ ಗಾತ್ರ

ಕಾಡುಗೊಲ್ಲ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರವು ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಮೊದಲು ‘ಗೊಲ್ಲ ಅಭಿವೃದ್ಧಿ ನಿಗಮ’ ಎಂದು ಆದೇಶ ಹೊರಡಿಸಲಾಗಿತ್ತು. ನಂತರ ಕೆಲವರ ಒತ್ತಡದಿಂದಾಗಿ ತಕ್ಷಣವೇ ಕಾಡುಗೊಲ್ಲರಿಗೆ ಸೀಮಿತಗೊಳಿಸಿ ಪರಿಷ್ಕರಿಸಿದ ಆದೇಶ ಹೊರಡಿಸಲಾಗಿದೆ ಎಂದು ವರದಿಯಾಗಿದೆ (ಪ್ರ.ವಾ., ಸೆ. 30). ಊರುಗೊಲ್ಲರಿಗಿಂತ ಕಾಡುಗೊಲ್ಲರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕ ಚಿಂತನೆಗಳಲ್ಲಿ ತೀರಾ ಹಿಂದುಳಿದಿರುವುದನ್ನು ಅಧ್ಯಯನಕಾರನಾಗಿ ಗಮನಿಸಿದ್ದೇನೆ. ಈ ದೃಷ್ಟಿಯಿಂದ ಸರ್ಕಾರದ ಆದೇಶ ಸರಿಯಾಗಿದೆ.

ಇಷ್ಟಾಗಿಯೂ ಕೇವಲ ನಿಗಮದ ಸ್ಥಾಪನೆಯಿಂದ ಸಮುದಾಯದ ಸಮಗ್ರ ಅಭಿವೃದ್ಧಿ ಆಗಿಬಿಡುತ್ತದೆ ಎಂಬ ನಂಬಿಕೆ ಇಲ್ಲ. ಅಧ್ಯಕ್ಷ ಸ್ಥಾನ ದಕ್ಕಿಸಿಕೊಳ್ಳುವವರು ಪ್ರಾಮಾಣಿಕತೆ, ಶ್ರದ್ಧೆ ಇರಿಸಿಕೊಳ್ಳದಿದ್ದರೆ ಅದು ಸಚಿವ ಸ್ಥಾನ ವಂಚಿತರ ತಾತ್ಕಾಲಿಕ ವಿಶ್ರಾಂತಿಧಾಮ ಆಗಿಬಿಡುವ ಅಪಾಯವಿದೆ. ಇದನ್ನು ಸುಳ್ಳು ಮಾಡುವವರು ಬೇಗ ಮುಂದಾಳತ್ವ ವಹಿಸಲಿ. ಸಮುದಾಯದ ಅಭಿವೃದ್ಧಿಗೆ ಅಗತ್ಯವಾಗಿ ಆಗಬೇಕಾದ ಕಾರ್ಯಗಳ ಕಡೆ ಗಮನಹರಿಸಲಿ.

ಡಾ. ಟಿ.ಗೋವಿಂದರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT