ಸೋಮವಾರ, ಫೆಬ್ರವರಿ 24, 2020
19 °C

ನಟನ ಆದರ್ಶ ನಡೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಇಂದು ಆಡಂಬರದ ಜೀವನಶೈಲಿ ಅಳವಡಿಸಿಕೊಂಡಿರುವವರೇ ಹೆಚ್ಚಾಗಿದ್ದಾರೆ. ಅದರಲ್ಲೂ ಸೆಲೆಬ್ರಿಟಿ
ಗಳೆಂದರೆ ಹೇಳತೀರದು; ಎಲ್ಲದರಲ್ಲೂ ವೈಭವ, ದುಂದುವೆಚ್ಚ. ಇವರ ನಡುವೆ ನಟ ಚೇತನ್ ಸರಳವಾಗಿ, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವುದು ಆದರ್ಶ ಮತ್ತು ಅನುಕರಣೀಯ ನಡೆ.

ಒಬ್ಬ ನಟನಾಗಿ ಸಾರ್ವಜನಿಕ ಜೀವನದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ತಾವು ನಂಬಿದ ಸಿದ್ಧಾಂತಕ್ಕೆ ಅವರು ಬದ್ಧರಾಗಿರುವುದು ಅಭಿನಂದನೀಯ ಮತ್ತು ಅನುಕರಣೀಯ. ಸಂವಿಧಾನದ ಹೊತ್ತಗೆಯನ್ನು ಸಾಕ್ಷಿಯಾಗಿಟ್ಟು ದಾಂಪತ್ಯಕ್ಕೆ ಕಾಲಿರಿಸಿದ ಚೇತನ್‌, ಯುವಜನರಿಗೆ ಮಾದರಿ.

- ರುದ್ರೇಶ್ ಅದರಂಗಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)