ಬುಧವಾರ, ನವೆಂಬರ್ 20, 2019
22 °C

ಗಾದೆಗಳ ವಾಚ್ಯಾರ್ಥದ ಅರ್ಥೈಸುವಿಕೆ ಸಲ್ಲ

Published:
Updated:

ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಸಭೆಯೊಂದರಲ್ಲಿ ಮಾತನಾಡುತ್ತ ‘ಕುಣೀಲಾರದ ಸೂಳೆ ನೆಲ ಡೊಂಕೆಂದಳು’ ಎಂದು ಹೇಳಿರುವುದಕ್ಕೆ ಏನೇನೋ ಅರ್ಥ ಕಲ್ಪಿಸಿ ಕೆಲವರು ಮಾತನಾಡಿದ್ದಾರೆ. ಅದೊಂದು
ಗಾದೆ ಮಾತಾಗಿದ್ದು, ಕನ್ನಡ ಭಾಷೆಯಲ್ಲಿ ಗಾದೆಗಳು ಅಸಂಖ್ಯವಾಗಿವೆ.

ಆ ಗಾದೆಗಳು ನಮ್ಮ ಜನಜೀವನದ ಪ್ರತೀಕಗಳಾಗಿವೆ. ಸಿದ್ದರಾಮಯ್ಯ ಹೇಳಿದ ಗಾದೆ ‘ಕೈಲಾಗದವನು ಮೈ ಪರಚಿಕೊಂಡ’ ಎಂಬ ಗಾದೆಯನ್ನು ನೆನಪಿಸುತ್ತದೆ. ಗಾದೆಗಳನ್ನು ನಾವು ಕೇವಲ ವಾಚ್ಯಾರ್ಥದ ನೆಲೆಯಲ್ಲಿ ನೋಡುವುದು ತಪ್ಪು. ಅವು ಧ್ವನಿಸುವುದೇನನ್ನು ಎಂಬುದನ್ನಷ್ಟೇ ನಾವು ನೋಡಬೇಕು.

ಹೊರೆಯಾಲ ದೊರೆಸ್ವಾಮಿ, ಮೈಸೂರು

ಪ್ರತಿಕ್ರಿಯಿಸಿ (+)