ಮಂಗಳವಾರ, ಡಿಸೆಂಬರ್ 1, 2020
26 °C

ಕನ್ನಡ ಮೊದಲ ಆಯ್ಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಗೆ ಕಾವೇರಿ ನೀರಿನ ಸಂಪರ್ಕ ಪಡೆಯುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ (ಬಿಡಬ್ಲ್ಯುಎಸ್‌ಎಸ್‌ಬಿ) ಬಂದ ‘ಡಿಮ್ಯಾಂಡ್ ನೋಟ್’ ತಲೆಬರಹದ ಒಂದು ಪತ್ರ ನೋಡಿದೆ. ಒಂದೇ ಒಂದು ಪದವೂ ಕನ್ನಡವಿಲ್ಲದೆ ಬರೀ ಇಂಗ್ಲಿಷ್‌ನಲ್ಲಿ ಬರೆದಿದ್ದ ಪತ್ರವನ್ನು ನೋಡಿ ಆಶ್ಚರ್ಯ ಹಾಗೂ ಬೇಸರವಾಯಿತು. ಕರ್ನಾಟಕದ ಗ್ರಾಹಕರ ಸೇವೆಗಾಗಿ ಇರುವ ಕರ್ನಾಟಕದ ಸಂಸ್ಥೆಯೊಂದು ಇಂಗ್ಲಿಷ್‌ನಲ್ಲಿ ಮಾತ್ರ ಬರೆದರೆ, ಕನ್ನಡವನ್ನಷ್ಟೇ ಬಲ್ಲ ಗ್ರಾಹಕರು ಹೇಗೆ ಓದಿ ಅರ್ಥ ಮಾಡಿಕೊಂಡಾರು?

ಕನ್ನಡದ ಅಭಿಮಾನ, ಭಾವೋದ್ವೇಗ ಇವುಗಳನ್ನೆಲ್ಲ ಪಕ್ಕಕ್ಕಿಟ್ಟು, ವಾಸ್ತವಾಂಶಗಳಿಂದ ನೋಡಿದರೂ ಕನ್ನಡದಲ್ಲಿ ವ್ಯವಹರಿಸಿದರೆ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಯಾವುದೇ ಗೊಂದಲವಿರುವುದಿಲ್ಲ. ಇಲ್ಲದಿದ್ದರೆ ಪತ್ರವನ್ನೇ ಓದದೆ ಕೊನೆಯಲ್ಲಿ ಕಾಣಿಸುವ ಅಂಕಿಯಷ್ಟು ಹಣವನ್ನು ಕೊಟ್ಟು ತೆಪ್ಪಗಿರಬೇಕಾಗುತ್ತದೆ. ಬೇಕಿದ್ದರೆ ಎರಡನೇ ಆಯ್ಕೆಯಲ್ಲಿ ಇಂಗ್ಲಿಷ್‌ ಇರಲಿ. ಆದರೆ ಕನ್ನಡದ ಜಾಗವನ್ನು ಬೇರೆ ಭಾಷೆಗಳು ಆಕ್ರಮಿಸುವುದು ಖಂಡನೀಯ. ಈ ಸಂದರ್ಭದಲ್ಲಿ ತೇಜಸ್ವಿಯವರ ಒಂದು ಮಾತು ನೆನಪಿಗೆ ಬರುತ್ತದೆ. ಕಾಳಿದಾಸ, ಬಾಣ, ಭವಭೂತಿಯಂತಹ ಮಹಾನ್ ಕವಿಗಳು ಮಹಾಕಾವ್ಯಗಳನ್ನು ಬರೆದಿದ್ದರೂ ಸಂಸ್ಕೃತ ಮಾಯವಾಯಿತು. ಸಾಮಾನ್ಯ ಜನ ತಮ್ಮ ನಿತ್ಯದ ವ್ಯವಹಾರಗಳಲ್ಲಿ ಸಂಸ್ಕೃತವನ್ನು ಬಳಸದೇ ಹೋದದ್ದು ಇದಕ್ಕೆ ಕಾರಣ. ಹಾಗೆಯೇ ನಮ್ಮ ಕನ್ನಡವನ್ನು ದಿನನಿತ್ಯದ ವ್ಯವಹಾರದಲ್ಲಿ ಬಳಸದೇ ಹೋದರೆ ಕನ್ನಡವೂ ಸಂಸ್ಕೃತದ ಹಾದಿ ಹಿಡಿಯುತ್ತದೆ.

- ನಾಗರಾಜ್ ಮಾದೇಗೌಡ, ಕನಕಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು