ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಪಕ್ಷ ತ್ಯಜಿಸಿದವರನ್ನು ತೆಗಳುವುದು ಜಾಡ್ಯ

Last Updated 26 ಮೇ 2022, 19:13 IST
ಅಕ್ಷರ ಗಾತ್ರ

ಕಪಿಲ್ ಸಿಬಲ್ ಅವರು ‘2014 ಮತ್ತು 2019ರಲ್ಲಿ ಚಾಂದಿನಿ ಚೌಕ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸೋತವರು, ಅವರು ನಿವೃತ್ತಿಗೆ ಅರ್ಹರು’ ಎಂದು ಕಾಂಗ್ರೆಸ್‌ ಮುಖಂಡ ಮಣಿಶಂಕರ್ ಅಯ್ಯರ್ ಟ್ವೀಟ್ ಮಾಡಿದ್ದಾರೆ (ಪ್ರ.ವಾ., ಮೇ 26). ವಯಸ್ಸಿನಲ್ಲಿ ಹಿರಿಯರಾದ ದಿಗ್ವಿಜಯ ಸಿಂಗ್, ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮತ್ತೊಬ್ಬ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರಂತೆಯೇ ಲೋಕಸಭಾ ಚುನಾವಣೆಯಲ್ಲಿ ಸೋತು ರಾಜ್ಯಸಭೆ ಪ್ರವೇಶಿಸಿದವರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚಾಯ್‌ವಾಲಾ’ ಎಂದಿದ್ದಕ್ಕೆ ಕಾಂಗ್ರೆಸ್ ಪಕ್ಷವೇ ಅಯ್ಯರ್ ಅವರನ್ನು ನೇಪಥ್ಯಕ್ಕೆ ಸರಿಸಿದರೆ, ‘ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಗಾಂಧಿ ಕುಟುಂಬದವರು ಇರಬಾರದು’ ಎಂದು ಕಪಿಲ್ ಸಿಬಲ್ ಅವರು ಹೇಳುತ್ತಲೇ ಬಂದರೂ ಪಕ್ಷ ಕ್ರಮ ತೆಗೆದುಕೊಳ್ಳಲಿಲ್ಲ. ಸಿಬಲ್ ಅವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬ ಕಾರಣಕ್ಕೆ ಪಕ್ಷವನ್ನು ತೊರೆದು, ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರರಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದಾರೆ. ಹೀಗಿರುವಾಗ, ಪಕ್ಷವು ತಮ್ಮನ್ನು ನೇಪಥ್ಯಕ್ಕೆ ಸರಿಸಿದರೂ ಅಯ್ಯರ್ ಅವರು ಸಿಬಲ್ ನಿವೃತ್ತರಾಗಬೇಕು ಎಂದು ಹೇಳುವುದು ಸ್ವಾಭಿಮಾನದ ಕೊರತೆಯಲ್ಲವೇ?
-ಪಿ.ಸಿ.ಕೇಶವ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT