ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಹಿಡುಕರಲ್ಲ, ಆದರೆ...

Last Updated 11 ಮಾರ್ಚ್ 2020, 19:48 IST
ಅಕ್ಷರ ಗಾತ್ರ

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರನ್ನು ಕಾಂಗ್ರೆಸ್‌ನ ಕೆ.ಆರ್.ರಮೇಶ್‍ ಕುಮಾರ್ ಅವರು ‘ತಲೆಹಿಡುಕ’ ಎಂದು ಕರೆದಿರುವುದು (ಪ್ರ.ವಾ., ಮಾರ್ಚ್ 11) ಶುದ್ಧ ತಪ್ಪು. ನೈತಿಕವಾಗಿ ಮಾತ್ರವಲ್ಲ, ತಾಂತ್ರಿಕವಾಗಿ ಕೂಡ. ಏಕೆಂದರೆ ಸುಧಾಕರ್ ತಲೆಹಿಡಿಸಿಕೊಂಡವರೇ ಹೊರತು, ತಲೆಹಿಡಿದವರಲ್ಲ. ಅವರ ತಲೆಹಿಡಿದವರು ಬೇರೆ. ಆದರೆ ಇಂದು ಈ ತಲೆಹಿಡುಕತನವು ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಭಾಗವೇ ಆಗಿಹೋಗಿ, ಕರ್ನಾಟಕದಲ್ಲಿ ಇತ್ತೀಚೆಗೆ ಕಂಡಂತೆ ಜನರಿಂದ ಭಾರಿ ಚುನಾವಣಾ ಮಾನ್ಯತೆಯನ್ನೂ ಪಡೆದಿದೆ.

ಕೆಲವರು ಈ ಕ್ಷೇತ್ರದಲ್ಲಿ ಇದೀಗ ಹೊಸ ಹೊಸ ತಂತ್ರಗಳನ್ನೂ ಆವಿಷ್ಕರಿಸಿ, ವಿಶೇಷ ಪರಿಣತಿಯನ್ನೂ ಸಾಧಿಸಿದ್ದಾರೆ. ಇದರಿಂದಾಗಿ ಇದು ರಾಷ್ಟ್ರದಾದ್ಯಂತ ಹರಡಿ, ಮಧ್ಯಪ್ರದೇಶದಲ್ಲಿ ಇಂದು ಕಾಣುತ್ತಿರುವಂತೆ ದಿನನಿತ್ಯದ ಸಹಜ ವ್ಯವಹಾರವಾಗಿಬಿಟ್ಟಿದೆ. ಆದ್ದರಿಂದ ಈ ವ್ಯವಹಾರ ಮಾಡುವ ಜನರಾಗಲೀ, ಪಕ್ಷಗಳಾಗಲೀ ಸಾರ್ವಜನಿಕವಾಗಿ ಮುಜುಗರಪಡದೆ ರಾಜಾರೋಷವಾಗಿ ತಮ್ಮನ್ನು ತಲೆಹಿಡುಕ ಅಥವಾ ತಲೆಹಿಡುಕ ಪಕ್ಷದವರೆಂದು ಹೇಳಿಕೊಳ್ಳಬಹುದಾಗಿದೆ. ಬೇಕಾದರೆ ಅವರು ತಮ್ಮದೊಂದು ಹಳೆಯ ಘೋಷಣೆಯನ್ನು ಹೀಗೆ ಬದಲಾಯಿಸಿಕೊಳ್ಳಬಹುದು: ‘ಗರ್ವದಿಂದ ಹೇಳಿಕೊಳ್ಳಿ, ನಾವು ತಲೆಹಿಡುಕರೆಂದು!’

-ಡಿ.ಎಸ್. ನಾಗಭೂಷಣ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT