ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಎಲ್ಲಿ?

Last Updated 12 ಡಿಸೆಂಬರ್ 2018, 19:43 IST
ಅಕ್ಷರ ಗಾತ್ರ

ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ತೀರ ಹಿಂದುಳಿದಿದ್ದ ಉತ್ತರ ಕರ್ನಾಟಕದ ಕನ್ನಡಿಗರು ಹಲವಾರು ಕನಸುಗಳನ್ನು ಕಂಡಿದ್ದರು. ಆದರೆ ಏಕೀಕರಣವಾಗಿ ಆರು ದಶಕಗಳು ದಾಟಿದರೂ ಅಭಿವೃದ್ಧಿ ಕಾಣದೆ ಅವರಿಗೆ ಭ್ರಮನಿರಸನವಾಗಿದೆ.

ಅದೇ ಕಾರಣಕ್ಕಾಗಿ ಉತ್ತರ ಕರ್ನಾಟಕ ಸ್ವತಂತ್ರ ರಾಜ್ಯದ ಕೂಗು ಕೇಳಿಬರುತ್ತಿದೆ. ಕೆಲವು ವರ್ಷಗಳಿಂದ ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ಅದರಿಂದ ಈ ಭಾಗದ ಅಭಿವೃದ್ಧಿಗೆ ಕಿಂಚಿತ್ ಪ್ರಯೋಜನವೂ ಆದಂತಿಲ್ಲ.

ಈ ನಡೆಯುತ್ತಿರುವ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಅರ್ಥಪೂರ್ಣ ಚರ್ಚೆ ಆಗಲಿ. ಸರ್ಕಾರದ ಕೆಲವು ಕಚೇರಿಗಳಾದರೂ ಸುವರ್ಣಸೌಧಕ್ಕೆ ಸ್ಥಳಾಂತರವಾಗಲಿ. ಸರ್ಕಾರ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಲಿ.

ಆರ್.ಎಸ್. ಚಾಪಗಾವಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT