ಬುಧವಾರ, ಸೆಪ್ಟೆಂಬರ್ 18, 2019
28 °C

ವೈಪರೀತ್ಯ ಎದುರಿಸಲು ಸಿದ್ಧರಾಗೋಣ

Published:
Updated:

‘ಮುಂದಿನ 80 ವರ್ಷಗಳ ಕಾಲ ರಾಜ್ಯವನ್ನು ಅತಿವೃಷ್ಟಿ, ಅನಾವೃಷ್ಟಿ ಕಾಡಲಿದ್ದು, ಅದನ್ನು ಎದುರಿಸಲು ಪೂರ್ವತಯಾರಿ ಮಾಡಿಕೊಳ್ಳಬೇಕು’ ಎಂದು ಕೃಷಿ ಹವಾಮಾನ ತಜ್ಞ ಡಾ. ಎಂ.ಬಿ. ರಾಜೇಗೌಡ ಅವರು ಅಂಕಿ ಅಂಶಗಳ ಸಹಿತ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ (ಪ್ರ.ವಾ., ಆ. 24).

ಅತಿವೃಷ್ಟಿಯ ಸಂದರ್ಭದಲ್ಲಿ ನದಿಗಳ ಮೂಲಕ ಹರಿದು ಹೋಗುವ ನೀರನ್ನು ಸಂಗ್ರಹಿಸಿಡುವ ಕ್ರಮವಾಗಬೇಕು. ಪ್ರತೀ ಮನೆಯಲ್ಲೂ ಮಳೆ ನೀರಿನ ಸಂಗ್ರಹ ಆಗಬೇಕಾದದ್ದು ಅನಿವಾರ್ಯವೂ ಹೌದು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ವರ್ಷಕ್ಕೆ ಕನಿಷ್ಠ 5 ಕೋಟಿ ಲೀಟರ್‌ ನೀರು ಸಂಗ್ರಹಿಸಿಡುವ ಯೋಜನೆಯನ್ನು ಅನುಷ್ಠಾನಕ್ಕೆ ತಂದಿರುವುದು ಮಾದರಿ. ಶಾಲಾ ಕಾಲೇಜುಗಳು ಇಂತಹ ಕ್ರಮ ಅನುಸರಿಸುವುದು ಒಳ್ಳೆಯದು. ಎಲ್ಲಾ ಖಾಸಗಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಈ ಕಡೆ ಗಮನ ಹರಿಸಬೇಕು.

ಒಂದು ಕಡೆ ನೆರೆ, ಇನ್ನೊಂದು ಕಡೆ ಬರ ಎಂಬ ಸ್ಥಿತಿ ಈಗಲೂ ರಾಜ್ಯದಲ್ಲಿದೆ. ಈ ವರ್ಷ ಕೆಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾದರೆ, ತುಮಕೂರು, ಬೆಂಗಳೂರು ಮತ್ತಿತರ ಕಡೆ ಹದ ಮಳೆಯೇ ಆಗಿಲ್ಲ. ಇಂಥ ಕಡೆಗಳಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದು. ಇಂಥ ಸ್ಥಿತಿಯನ್ನು ನಿಭಾಯಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.

-ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

Post Comments (+)