ಕೆಎಸ್‌ಒಯು ತರಬೇತಿ: ಅಭ್ಯರ್ಥಿಸ್ನೇಹಿ ಆಗಲಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕೆ- ಸೆಟ್ ಹಾಗೂ ಯುಜಿಸಿ- ನೆಟ್ ಅರ್ಹತಾ ಪರೀಕ್ಷೆಗೆ ತರಬೇತಿ ನೀಡಲಿದೆ (ಪ್ರ.ವಾ., ಫೆ. 4). ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೊಟ್ಟ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಾಗ, ತರಗತಿಗಳು ಮೈಸೂರಿನಲ್ಲಿ ಮಾತ್ರ ನಡೆಯುತ್ತಿದ್ದು, 45 ದಿನಗಳ ತರಬೇತಿಗೆ ₹ 500 ಶುಲ್ಕ ನಿಗದಿಪಡಿಸಲಾಗಿದೆ. ತರಬೇತಿಗೆ ಹೆಸರನ್ನು ಕೂಡ ಮೈಸೂರಿಗೆ ಹೋಗಿ ನೋಂದಾ ಯಿಸಬೇಕಾಗಿದೆ. ಇದರಿಂದ ಹೊರ ಜಿಲ್ಲೆಯ ತರಬೇತಿ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ರಾಜ್ಯದಾದ್ಯಂತ ಇರುವ ಕೆಎಸ್‌ಒಯು ಪ್ರಾದೇಶಿಕ ಕಚೇರಿಗಳಲ್ಲಿ ತರಬೇತಿ ನೀಡಿದರೆ ಸ್ಪರ್ಧಾಕಾಂಕ್ಷಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ.
- ಉಮೇಶಗೌಡ ಹಳೇಮನಿ ಹಲಗೇರಿ, ಧಾರವಾಡ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.