ಶುಕ್ರವಾರ, ಡಿಸೆಂಬರ್ 4, 2020
20 °C

ಸರಳ ಕಟ್ಟಡ ಆದ್ಯತೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣ, ಆರೇೂಗ್ಯ ಮತ್ತು ಲಾಲಸೆ ಕುರಿತ ಲೇಖನದಲ್ಲಿ (ಪ್ರ.ವಾ., ನ. 5) ಡಾ. ಶಿವಮೂರ್ತಿ ಮುರುಘಾ ಶರಣರು, ಶಾರೀರಕ ಶ್ರಮ ವಹಿಸುವ ದಿನಗೂಲಿ ನೌಕರರು, ಕೃಷಿಕರು, ಔದ್ಯೋಗಿಕ ಕೇಂದ್ರಗಳಲ್ಲಿ ಕೆಲಸ ಮಾಡುವವರನ್ನು ಕೊರೊನಾ ವೈರಾಣು ಹೆಚ್ಚಿಗೆ ಬಾಧಿಸುತ್ತಿಲ್ಲ ಎಂದು ಹೇಳಿರುವುದು ಚಿಂತನೆಗೆ ಹಚ್ಚುವಂತಿದೆ. ಜೊತೆಗೆ, ಐಷಾರಾಮಿ ಕಟ್ಟಡಗಳ ಆಸ್ಪತ್ರೆಗಳು, ಆ ಕಾರಣಕ್ಕಾಗಿಯೇ ದುಬಾರಿ ಶುಲ್ಕ ವಸೂಲಿ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಆಲೇೂಚಿಸುವಂತಾಗಿದೆ. ಆಸ್ಪತ್ರೆಗಳಲ್ಲಿ ಜನರ ನಿರೀಕ್ಷೆಯು ಗುಣಮಟ್ಟದ ಚಿಕಿತ್ಸೆಯಷ್ಟೇ. ಇದನ್ನು ಅರಿತು, ಸರಳ ಕಟ್ಟಡದ ಆಸ್ಪತ್ರೆಗಳನ್ನು ನಿರ್ಮಿಸುವತ್ತ
ಗಮನಹರಿಸಬೇಕಾಗಿದೆ.

- ಡಾ. ಟಿ.ಜಯರಾಂ, ಕೋಲಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.