ಭಾನುವಾರ, ಸೆಪ್ಟೆಂಬರ್ 19, 2021
25 °C

ಗೋಪಾಲಗೌಡರ ಜೀವನಮೌಲ್ಯ ದಾರಿದೀಪವಾಗಲಿ

ಬಿ.ಎಸ್. ತಿಮ್ಮೋಲಿ - ಶಿವಮೊಗ್ಗ Updated:

ಅಕ್ಷರ ಗಾತ್ರ : | |

ರಾಜಕಾರಣ ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ಜೀವನ, ತತ್ವ, ಮೌಲ್ಯಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅಭಿಪ‍್ರಾಯಪಟ್ಟಿದ್ದಾರೆ (ಪ್ರ.ವಾ., ಜ. 21). ಇತ್ತೀಚೆಗೆ ನಡೆದಿದೆ ಎನ್ನಲಾದ ಕಾಂಗ್ರೆಸ್ ಶಾಸಕರ ಹೊಡೆದಾಟವನ್ನು ನೆನಪಿಸಿಕೊಂಡರೆ ತಿಮ್ಮಪ್ಪ ಅವರ ಮಾತಿನ ಹಿಂದಿನ ಮರ್ಮ ಮನವರಿಕೆಯಾಗುತ್ತದೆ.

ನ್ಯಾಯಸಮ್ಮತ ಸಾಮಾಜಿಕ, ರಾಜಕೀಯ ಹೋರಾಟಗಳನ್ನು ಹುಟ್ಟುಹಾಕಿದ ಗೋಪಾಲಗೌಡರಿಂದ ಪ್ರೇರಣೆ ಪಡೆದು ಶಿವಮೊಗ್ಗ ಜಿಲ್ಲೆಯ ಹಲವಾರು ರಾಜಕೀಯ ಮುಖಂಡರು ಜಿಲ್ಲೆಯಲ್ಲಿ ಸಮಾಜವಾದ ನೆಲೆಯೂರುವಂತೆ ಮಾಡಿದ್ದು ಈಗ ಇತಿಹಾಸ. ಇಂದಿನ ವೈಷಮ್ಯದ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರು ನಮಗೆ ಆದರ್ಶಪ್ರಾಯರಾಗುತ್ತಾರೆ. ಪ‍್ರಾತಃಸ್ಮರಣೀಯರಾಗುತ್ತಾರೆ. ಅವರ ಜೀವನ ಮೌಲ್ಯ, ಸಿದ್ಧಾಂತ, ಕಾಲಪ್ರವಾಹದಲ್ಲಿ ಕೊಚ್ಚಿ ಹೋಗದೆ ನಾಳಿನ ಬಾಳಿಗೆ ದಾರಿದೀಪವಾಗಬೇಕು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು