ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಖಿಕ ರೂಪದ ನಿಯಮ

Last Updated 20 ಜುಲೈ 2021, 19:30 IST
ಅಕ್ಷರ ಗಾತ್ರ

ಬೋಧಕಿಯರ ವಸ್ತ್ರಸಂಹಿತೆ ಕುರಿತು ಚಿಕ್ಕಮಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಿವೇಕಯುತ ಸುತ್ತೋಲೆ ಹೊರಡಿಸಿರುವುದನ್ನು ಶ್ಲಾಘಿಸಲಾಗಿದೆ (ಪ್ರ.ವಾ., ಜುಲೈ 19). ಈಗಲೂ ಶಾಲೆಗಳಲ್ಲಿ ಶಿಕ್ಷಕಿಯರು ಸೀರೆ ತೊಟ್ಟು ಬರಬೇಕೆಂಬ ನಿಯಮವಿದೆ. ಇದು ಲಿಖಿತ ರೂಪದಲ್ಲಿ ಇಲ್ಲ. ಹಾಗೆ ಮಾಡಿದರೆ ಸಂವಿಧಾನದ ಪ್ರಕಾರ ಸ್ವಾತಂತ್ರ್ಯವನ್ನು ಕಸಿದುಕೊಂಡಂತಾಗುತ್ತದೆ. ಹೀಗಾಗಿ ಇದು ಮೌಖಿಕ ರೂಪದಲ್ಲಿ ಇರುತ್ತದೆ.

ಶಿಕ್ಷಕಿಯರ ಉಡುಗೆ ತೊಡುಗೆ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ ಎಂಬುದು ಕೆಲವರ ವಾದ. ಎಲ್ಲ ಕ್ಷೇತ್ರ
ಗಳಲ್ಲೂ ಆಧುನಿಕತೆಯನ್ನು ಬಯಸುತ್ತಿರುವ ನಾವು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದೇವೆ. ಆನ್‌ಲೈನ್‌ ಕಲಿಕೆಗೆ ಹೊಂದಿಕೊಳ್ಳುತ್ತಿದ್ದೇವೆ. ಹೀಗಿರುವಾಗ ಶಿಕ್ಷಕಿಯರು ಉಡುಗೆಯ ಶೈಲಿ ಬದಲಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ಹಾಗೆಂದು ಇಷ್ಟ ಬಂದ ಹಾಗೆ ಬಟ್ಟೆ ತೊಡುವುದು ಅಂತಲ್ಲ. ಶಿಕ್ಷಕಿಯರಿಗೆ ತಾವು ಯಾವ ಸ್ಥಳದಲ್ಲಿ ಇದ್ದೇವೆ ಹಾಗೂ ತಮ್ಮನ್ನು ಮಕ್ಕಳು ಅನುಸರಿಸುತ್ತಾರೆ ಎಂಬ ಸಾಮಾಜಿಕ, ವೈಯಕ್ತಿಕ ಪರಿಜ್ಞಾನವಿರಬೇಕು.

- ಸ್ನೇಹಾ ರೆಡ್ಡಿ,ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT