ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ರೊಕ್ಕದ ಬೆಳೆಗೆ ಮೊರೆ ಹೋದರು...

Last Updated 9 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದಲ್ಲಿ ಜೋಳ, ದಕ್ಷಿಣ ಕರ್ನಾಟಕದಲ್ಲಿ ರಾಗಿ ಪ್ರಮುಖ ಆಹಾರಧಾನ್ಯದ ಬೆಳೆಗಳು ಎನ್ನುವುದನ್ನು ಯಾರೂ ಅಲ್ಲಗಳೆಯಲಾರರು. ಜೋಳಕ್ಕೆ ರಾಗಿಗಿಂತ ಕಡಿಮೆ ಬೆಂಬಲ ಬೆಲೆ ನಿಗದಿ ಮಾಡಿದ್ದು ತಾರತಮ್ಯವಲ್ಲದೆ ಮತ್ತೇನು? (ಸಂಗತ, ಸೆ. 9). ಹೀಗಾಗಿಯೇ ರೈತರು ಜೋಳ ಬೆಳೆಯುವುದನ್ನು ಬಿಟ್ಟು, ರೊಕ್ಕದ ಬೆಳೆಯಾಗಿ ವಕ್ಕರಿಸಿದ ಸೂರ್ಯಕಾಂತಿಗೆ ಮೊರೆ ಹೋದದ್ದು.

‘ಕಲ್ಯಾಣ ಕರ್ನಾಟಕ’ ಎಂದು ಹೆಸರು ಬದಲಾಯಿಸಿದ ಮಾತ್ರಕ್ಕೆ ಯಾರ ಕಲ್ಯಾಣವಾದ ಹಾಗಾಯಿತು? ಅನಕ್ಷರಸ್ಥ, ಅಮಾಯಕ ಮತದಾರರ ಮೂಗಿಗೆ ತುಪ್ಪ ಸವರಿ ಆರಿಸಿ ಬಂದವರು ತಮ್ಮ ಉದ್ಧಾರ ಮಾಡಿಕೊಂಡರಷ್ಟೆ. ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷಗಳಾದರೂ ಇಲ್ಲಿನ ಜನರ ಬದುಕು ಹಸನಾಗಲಿಲ್ಲವಲ್ಲ ಎಂಬ ಕೊರಗು- ಅದೇ ನೆಲದಿಂದ ಎದ್ದು ಬಂದ ನನ್ನಂತಹವರಿಗೆ!

- ಈರಪ್ಪ ಎಂ. ಕಂಬಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT