ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ವಸತಿ ಯೋಜನೆ: ಚಾಣಾಕ್ಷ ನಡೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಹ ಬಡವರಿಗಲ್ಲದೆ ಅನರ್ಹರಿಗೆ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ (ಪ್ರ.ವಾ., ಮೇ 14) ಎಂಬುದನ್ನು ತಿಳಿದು ಸಂತೋಷವಾಯಿತು. ಆದರೆ ಇದು ಕೇವಲ ಪತ್ರಿಕಾ ಹೇಳಿಕೆಯಾಗದೆ ನಿಜಕ್ಕೂ ಕಾರ್ಯರೂಪಕ್ಕೆ ಬರಬೇಕಾಗಿದೆ. ಹಾಗೆ ಮಾಡದಿದ್ದಲ್ಲಿ ಸರ್ಕಾರದ ಒಂದು ಒಳ್ಳೆಯ ಯೋಜನೆಯು ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ಹಿಂಬಾಲಕರ ಪಾಲಾಗುವ  ಸಾಧ್ಯತೆ ಇರುತ್ತದೆ. ಮನೆಯನ್ನು ಹಂಚುವಾಗ ಅಗತ್ಯ ದಾಖಲೆಗಳನ್ನು ಪರಿಶೀಲಿಸುವುದರ ಜೊತೆಗೆ ಸರ್ಕಾರಿ ಅಧಿಕಾರಿಗಳು ಆಗಾಗ್ಗೆ ಅಂತಹ ಮನೆಗಳಿಗೆ ಕನಿಷ್ಠ ನಾಲ್ಕೈದು ಬಾರಿಯಾದರೂ ಭೇಟಿ ಕೊಟ್ಟು, ಫಲಾನುಭವಿಗಳೇ ಮನೆಯಲ್ಲಿ ಇರುವುದನ್ನು  ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಸರ್ಕಾರ ಕೇವಲ ದಾಖಲೆಗಳನ್ನು ಪರಿಶೀಲಿಸಿ ‘ಚಾಪೆ ಕೆಳಗೆ ನುಸುಳಿದರೆ’, ಅವ್ಯವಹಾರ ಮಾಡುವವರು ‘ರಂಗೋಲಿ ಕೆಳಗೆ ನುಸುಳುವ’ ಚಾಣಾಕ್ಷ ನಡೆ ಹೊಂದಿರುತ್ತಾರೆ ಎಂಬುದನ್ನು ಮರೆಯಬಾರದು.

– ಕಡೂರು ಫಣಿಶಂಕರ್, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು