ಕೆಪಿಎಸ್ಸಿ ನೇಮಕಾತಿಯ ಅಂತಿಮ ಪಟ್ಟಿ ಪ್ರಕಟಣೆಯಲ್ಲಿನ ತೀವ್ರ ವಿಳಂಬವು ಉದ್ಯೋಗ ಆಕಾಂಕ್ಷಿಗಳ ಸಿಟ್ಟಿಗೆ ಕಾರಣವಾಗಿರುವುದು (ಪ್ರ.ವಾ., ಮೇ 12) ಸಕಾರಣವಾಗಿಯೇ ಇದೆ. ಸರ್ಕಾರಿ ಉದ್ಯೋಗ ಪಡೆಯಲು ಅಭ್ಯರ್ಥಿಗಳು ಹಾತೊರೆಯುತ್ತಿರುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳೆಲ್ಲವನ್ನೂ ಬದಿಗಿಟ್ಟು, ಹಲವಾರು ವರ್ಷಗಳಿಂದ ಅಭ್ಯಸಿಸಿ ಪರೀಕ್ಷೆ ಎದುರಿಸಿ ಫಲಿತಾಂಶಕ್ಕಾಗಿ ಕಾಯುತ್ತಾ ವರ್ಷಗಳೇ ಉರುಳಿ ಹೋಗುತ್ತವೆ.

ಇನ್ನು ಕೆಲವು ಸಂದರ್ಭಗಳಲ್ಲಿ, ಫಲಿತಾಂಶ ಬಂದರೂ ಅಕ್ರಮ ನಡೆದ ಆರೋಪದಡಿ ಕೋರ್ಟ್ವರೆಗೂ ಹೋಗಿ ಇನ್ನಷ್ಟು ವಿಳಂಬವಾದ ನಿದರ್ಶನಗಳಿವೆ. ಇಂತಹ ವಿಳಂಬ ತಪ್ಪಿಸಲು ಸರ್ಕಾರ ಗಂಭೀರವಾಗಿ ಯೋಚಿಸಬೇಕಿದೆ. ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು. ಪ್ರತಿಭಾವಂತರಿಗೆ ಕಾಲಮಿತಿಯೊಳಗೆ ಉದ್ಯೋಗ ಸಿಗುವ ವಿಶ್ವಾಸವನ್ನು ಮೂಡಿಸಬೇಕಿದೆ.

- ಹೇಮಂತ್ ಕುಮಾರ್ ಎಸ್.ಕೆ.,ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.