ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಈ ದಿಟ್ಟ ಹೆಜ್ಜೆ ಬೇಕಾಗಿತ್ತು!

Last Updated 28 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಮುಗಿದುಹೋದ ಗಡಿ ತಂಟೆಯನ್ನು ಮಹಾರಾಷ್ಟ್ರವು ಮತ್ತೆ ಕೆದಕುವ ಮೂಲಕ ವೃಥಾ ಗೊಂದಲ ಸೃಷ್ಟಿಸುತ್ತಿ ರುವುದು ಇದೇ ಮೊದಲಲ್ಲ. ಮಹಾರಾಷ್ಟ್ರ ಗಡಿ ತಂಟೆಯನ್ನು ಎತ್ತಿದಾಗಲೆಲ್ಲ ಕನಾಟಕವು ಕೊಡುವ ಉತ್ತರ: ‘ನಾವು ಒಂದು ಚೂರು ನೆಲವನ್ನೂ ಬಿಟ್ಟುಕೊಡುವುದಿಲ್ಲ’. ಇದನ್ನು ಮಹಾರಾಷ್ಟ್ರವು ನಮ್ಮ ಅಸಹಾಯಕತೆ ಎಂದು ಭಾವಿಸಿದೆ. ಮಹಾರಾಷ್ಟ್ರದಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿರಿರುವ ಸೊಲ್ಲಾಪುರ, ಅಕ್ಕಲಕೋಟೆ, ಕೊಲ್ಹಾಪುರ, ಕರವೀರಪುರ ಮತ್ತು ಜತ್‌ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕೆಂಬ ಬೇಡಿಕೆಯನ್ನು ದೃಢವಾಗಿ ಮಹಾರಾಷ್ಟ್ರದ ಮುಂದಿಡುವ ದಿಟ್ಟ ಕಾರ್ಯವನ್ನು ಈವರೆಗೂ ನಮ್ಮ ಮುಖ್ಯಮಂತ್ರಿಗಳು ಮಾಡದಿರುವುದು ಅವರ ಪುಂಡಾಟಕ್ಕೆ ಸಹಕಾರಿಯಾಗಿದೆ.

ತಡವಾದರೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರದೇಶಗಳು ಕರ್ನಾಟಕಕ್ಕೆ ಸೇರಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇಂತಹ ದಿಟ್ಟತನ ಅಗತ್ಯವಾಗಿ ಬೇಕಾಗಿತ್ತು! ಇದರಿಂದ ಮಹಾರಾಷ್ಟ್ರ ವಿಚಲಿತಗೊಂಡು ತನ್ನ ಮಾತಿನ ವರಸೆಯನ್ನು ಬದಲಾಯಿಸುತ್ತಿದೆ.

- ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ,ಸಿಂಧನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT