ಸೋಮವಾರ, ಸೆಪ್ಟೆಂಬರ್ 27, 2021
22 °C

ಉದ್ಯೋಗ ಖಾತರಿಯಿಂದ ‘ಹಸಿರು ಖಾತರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರಪೀಡಿತ ಪ್ರದೇಶಗಳಲ್ಲಿ ಬಡಜನರ ಗುಳೆ ತಡೆಯಲು ನಡೆಯುತ್ತಿರುವ ‘ಉದ್ಯೋಗ ಖಾತರಿ, ಬದುಕು ಖಾತರಿ’ ಅಭಿಯಾನ ಶ್ಲಾಘನೀಯ.  ‘ಹಸಿರು ಖಾತರಿ’ ಎಂಬುದು ಹಸಿರು ಕ್ರಾಂತಿಗೆ ದಾರಿ ತೆಗೆದರೆ ಬರಗಾಲದ ಸಮಸ್ಯೆಯನ್ನು ಶಾಶ್ವತವಾಗಿ ದೂರ ಮಾಡಬಹುದು.

ನಮ್ಮ ಚಿಂತನೆಗಳು ಬದಲಾಗಬೇಕಾದುದು ಇಂದಿನ ಅಗತ್ಯ. ಜನರ ಮನಸ್ಸನ್ನು ಪರಿವರ್ತಿಸುವ, ಜನರಲ್ಲಿ ಜಾಗೃತಿ ಮೂಡಿಸುವಂತಹ ‘ಹಸಿರು ಖಾತರಿ’ ಚಿಂತನೆಯು ಜನರಿಂದಲೇ ಮೂಡಿ ಬಂದಾಗ ಬದಲಾವಣೆ ಖಂಡಿತ ಸಾಧ್ಯವಿದೆ. ಮಳೆ– ಬೆಳೆ ಇಲ್ಲದ, ಬರಗಾಲದ ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ. ಪರಿಸರವನ್ನು ಹಾಳು ಮಾಡಿದ್ದೇವೆ. ಇವೆಲ್ಲ ಇನ್ನಾದರೂ ನಮಗೆ ಅರ್ಥವಾಗಲಿ.

-ಗೋಡೆ ಶಿವರಾಜ್ ಶಿರಿಗೇರಿ, ಬಳ್ಳಾರಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು