ಜೀವಂತ ಸ್ಮಾರಕ ನಿರ್ಮಿಸೋಣ

7

ಜೀವಂತ ಸ್ಮಾರಕ ನಿರ್ಮಿಸೋಣ

Published:
Updated:

ಈಚೆಗೆ ನಿಧನ ಹೊಂದಿದ ಹಿರಿಯ ಪೊಲೀಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಸ್ಮಾರಕ ನಿರ್ಮಿಸುವ ಕುರಿತು ಚರ್ಚೆಯಾಗುತ್ತಿದೆ. ಇದನ್ನು ನಾನೂ ಬೆಂಬಲಿಸುತ್ತೇನೆ. ಆದರೆ, ಈ ಸಂದರ್ಭದಲ್ಲಿ ನನ್ನದೊಂದು ಮನವಿ: ಕಬ್ಬಿಣ, ಸಿಮೆಂಟ್ ಬಳಸಿ ಕಟ್ಟಿದ ಸ್ಮಾರಕಗಳು ನಿರ್ವಹಣಾ ವೆಚ್ಚ ಬೇಡುತ್ತವೆ. ಕಾಲಾಂತರದಲ್ಲಿ ಸ್ಮಾರಕದ ನಿರ್ವಹಣೆ ಕುರಿತಾಗಿ ಕುಟುಂಬಸ್ಥರಲ್ಲಿ ಮತ್ತು ಅವರ ಅಭಿಮಾನಿಗಳಲ್ಲಿ ಆಸಕ್ತಿ ಕಡಿಮೆಯಾಗುವುದು ಸಹಜ. ಅಂತಹ ಸಂದರ್ಭದಲ್ಲಿ ಆ ಸ್ಮಾರಕ ಹಾಳು ಸುರಿಯುವ ನಿರ್ಮಿತಿಯಾಗಿಬಿಡುತ್ತದೆ. ಹಾಗಾಗಿ ಸ್ಮಾರಕಗಳು ನಿರ್ವಹಣಾವೆಚ್ಚ ಮುಕ್ತವಾಗಿರಬೇಕು.

ಆಲ, ಗೋಣಿ, ನೇರಳೆ, ಹಲಸು ಇವೇ ಮೊದಲಾದ ಯಾವುದಾದರೊಂದು ಸಸಿಯನ್ನು ನೆಟ್ಟು ಒಂದೆರಡು ವರ್ಷಗಳ ಕಾಲ ಪೋಷಿಸಿದರೆ, ಆ ಮರವು ಪ್ರಾಣಿ– ಪಕ್ಷಿಗಳ ಆಶ್ರಯ ತಾಣವಾಗಿ, ಆಹಾರ ಮೂಲವಾಗಿ ಪರಿಸರ ಶುದ್ಧಿ ಕಾರ್ಯದ ಘಟಕವಾಗಿ ನೂರಾರು ವರ್ಷಗಳ ಕಾಲ ಉಳಿಯಬಲ್ಲ ಜೀವಂತ ಸ್ಮಾರಕವಾಗಿಬಿಡುತ್ತದೆ. ಸಿಮೆಂಟ್ ಮತ್ತು ಕಬ್ಬಿಣ, ಭವಿಷ್ಯದ ಕಸ ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡು, ಕಳೆದುಕೊಂಡ ಆತ್ಮೀಯರ ನೆನಪಿಗೊಂದು ವೆಚ್ಚವಿಲ್ಲದ ಪರಿಸರಸ್ನೇಹಿ ಸ್ಮಾರಕ ನಿರ್ಮಿಸಿದರೆ ಆ ಮರದ ನೆರಳಿನಲ್ಲಿ ನಾವೂ ಒಂದು ದಿನ ವಿಶ್ರಮಿಸಿ ಬರಬಹುದಲ್ಲವೇ?

ಬಿ.ಆರ್. ರಮೇಶ್, ಹೊಳೆನರಸೀಪುರ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !