ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಯ ಆಟಕ್ಕೆ ನಿಯಂತ್ರಣ ಇಲ್ಲವೇ?

Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಗಿ ದಶಕಗಳೇ ಕಳೆದಿವೆ. ಆದರೆ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಬಹುಮತ ಲಭಿಸದೆ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲ ರಾಜಕೀಯ ಮೇಲಾಟಗಳು ಆರಂಭವಾಗುತ್ತವೆ, ತಂತ್ರ– ಕುತಂತ್ರಗಳು ನಡೆಯುತ್ತವೆ. ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಗೆದ್ದು ಬಂದ ನಂತರ ಅವರು ಆಡುವ ಆಟವನ್ನು ನೋಡುತ್ತಾ ಮತದಾರರು ತಲೆ ಚಚ್ಚಿಕೊಳ್ಳಬೇಕಾದ ಸ್ಥಿತಿ ಈಗ ನಿರ್ಮಾಣವಾಗಿದೆ. ಶ್ರೀಮಂತರು, ಪ್ರಭಾವಿ ಉದ್ಯಮಿಗಳು ಮತ್ತು ಜಾತಿಯ ಬಲ ಹೊಂದಿರುವವರು ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಪ್ರಜಾಪ್ರಭುತ್ವ ನಾಚುವಂತೆ ರಾಜಕೀಯದ ಆಟವಾಡಿಸುತ್ತಾರೆ.

ಕರ್ನಾಟಕದಲ್ಲೇ ನೋಡಿ, ಜನಪ್ರತಿನಿಧಿಯಾಗಿ ಆಯ್ಕೆಯಾಗಿ ಬಂದಿರುವ ಕೆಲವು ಬಂಡವಾಳಶಾಹಿಗಳು ತಮ್ಮ ತಮ್ಮ ಜಿಲ್ಲೆಯನ್ನು ಕುಟುಂಬದ ಆಸ್ತಿಯನ್ನಾಗಿಸಿದ್ದಾರೆ. ತಮ್ಮ ಕುಟುಂಬದವರು, ಬಂಧು– ಬಾಂಧವರು ಮತ್ತು ಅವರ ಅನುಯಾಯಿಗಳಿಗೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸುತ್ತಿದ್ದಾರೆ. ನಿತ್ಯಬದುಕಿನ ಹೋರಾಟದಲ್ಲಿ ಮುಳುಗಿರುವ ಜನಸಾಮಾನ್ಯರಿಗೆ ಇಂಥವರ ವಿರುದ್ಧ ಹೋರಾಡುವ ಶಕ್ತಿಯಾಗಲೀ ಧೈರ್ಯವಾಗಲೀ ಇಲ್ಲ. ತನಗೆ ಮಂತ್ರಿ ಪದವಿ ಕೊಡಲಿಲ್ಲ ಎಂಬ ಕಾರಣಕ್ಕೆ ಜನಪ್ರತಿನಿಧಿಯೊಬ್ಬ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪುನಃ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆದರೆ ಈ ಮರು ಚುನಾವಣೆಗೆ ತಗುಲುವ ಖರ್ಚನ್ನು ಸರ್ಕಾರವೇ ಭರಿಸಬೇಕು ತಾನೆ? ಇದು ಜನರ ತೆರಿಗೆಯ ಹಣದ ಅಪವ್ಯಯವಲ್ಲದೆ ಇನ್ನೇನು? ಹೀಗೆ ರಾಜೀನಾಮೆ ಕೊಟ್ಟು ಪುನಃ ಚುನಾವಣೆಗೆ ಸ್ಪರ್ಧಿಸುವ ವ್ಯವಸ್ಥೆಗೆ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT