ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ತಿದ್ದುಪಡಿ: ಅಲೆದಾಟ ತಪ್ಪಿಸಿ

Last Updated 15 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಈ ದಿನಗಳಲ್ಲಿ ಯಾವುದೇ ಇಲಾಖೆ, ಕಚೇರಿಯ ಯಾವುದೇ ಕೆಲಸಕ್ಕೆ ಹೋದರೂ ಆಧಾರ್ ಸಂಖ್ಯೆ ಕೇಳುವುದು ಮಾಮೂಲಿಯಾಗಿ ಬಿಟ್ಟಿದೆ. ಜೊತೆಗೆ ಆಧಾರ್‌ನ ಮಾಹಿತಿಗಳೆಲ್ಲವೂ ಸರಿಯಾಗಿರಬೇಕು. ಸ್ವಲ್ಪ ವ್ಯತ್ಯಾಸ
ವಿದ್ದರೂ ಹೊಂದಾಣಿಕೆಯಾಗದೆ ಕೆಲಸ ಆಗುವುದಿಲ್ಲ. ಈ ಕಾರಣದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಆಧಾರ್‌ನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಸೇವಾ ಕೇಂದ್ರಗಳಾದ ಕೆಲವು ಬ್ಯಾಂಕ್‍ಗಳಿಗೆ ಎಡತಾಕುತ್ತಿದ್ದಾರೆ. ಬ್ಯಾಂಕುಗಳು ದಿನಕ್ಕೆ 10-15 ಜನರಿಗೆ ಮಾತ್ರ ಈ ಸೇವೆಯನ್ನು
ನಿಗದಿಪಡಿಸಿಕೊಂಡಿವೆ. ಅದಕ್ಕೂ ಮುಂಗಡವಾಗಿಎರಡು ದಿನಗಳ ಮುಂಚೆಯೇ ಯಾವ್ಯಾವುದೋ ಸಮಯದಲ್ಲಿ ಟೋಕನ್ ವಿತರಿಸುತ್ತವೆ. ಟೋಕನ್ ಪಡೆಯಲಾಗದವರು ಬ್ಯಾಂಕ್‌ಗಳಿಗೆ ಅಲೆಯುವಂತಾಗಿದೆ. ವಿದ್ಯಾರ್ಥಿಗಳು, ನೌಕರರು ಕರ್ತವ್ಯದ ಅವಧಿಯಲ್ಲಿ ಬ್ಯಾಂಕ್ ಬಳಿ ಬರಲಾಗುವುದಿಲ್ಲ. ವಯಸ್ಸಾದವರ ಸ್ಥಿತಿ ಕೇಳುವಂತಿಲ್ಲ.

ಆಧಾರ್‌ನ ವಿವಿಧ ಮಾಹಿತಿಗಳನ್ನು ತಿದ್ದುಪಡಿ ಮಾಡುವ ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು. ಬ್ಯಾಂಕ್‍ನ ಕರ್ತವ್ಯದ ಅವಧಿ ಮುಗಿಯುವವರೆಗೂ ಈ ಪ್ರಕ್ರಿಯೆ ನಡೆಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

-ಹೊಳಲು ಶ್ರೀಧರ್,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT