ದೆಹಲಿಯ ಸರ್ಕಾರಿ ನಿವಾಸಗಳಲ್ಲಿ ಬೀಡು ಬಿಟ್ಟಿದ್ದ ಮಾಜಿ ಸಂಸದರು ಹಾಗೂ ಮಾಜಿ ಸಚಿವರನ್ನು ಹೊರಹಾಕಲು, ನಿವಾಸಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್, ನೀರು ಸರಬರಾಜನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು. ಆದರೆ ಈಗ ರಂಜನ್ ಗೊಗೊಯಿ ಅವರು ಸಿಜೆಐ ಸ್ಥಾನದಿಂದ ನಿವೃತ್ತರಾದ ಮೂರೇ ದಿನಗಳಲ್ಲಿ ಅಧಿಕೃತ ನಿವಾಸ ತೆರವುಗೊಳಿಸಿರುವುದನ್ನು ತಿಳಿದು ಅವರ ಬಗ್ಗೆ ಹೆಮ್ಮೆಯಾಯಿತು. ಈ ನಡೆ ಅನುಕರಣೀಯ.