ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿವಾದಿ ಹುನ್ನಾರಕ್ಕೆ ಬಲಿಯಾಗದವರು

Last Updated 28 ನವೆಂಬರ್ 2019, 19:27 IST
ಅಕ್ಷರ ಗಾತ್ರ

ಬಸವಣ್ಣನ ‘ಸೆಟ್ಟಿಯೆಂಬೆನೆ ಸಿರಿಯಾಳನ? ಮಡಿವಾಳನೆಂಬೆನೆ ಮಾಚಯ್ಯನ? ಡೋಹರನೆಂಬೆನೆ ಕಕ್ಕಯ್ಯನ? ಮಾದಾರನೆಂಬೆನೆ ಚೆನ್ನಯ್ಯನ? ಆನು ಹಾರುವನೆಂದಡೆ ಕೂಡಲ ಸಂಗಯ್ಯ ನಗುವನಯ್ಯ!’ ಎಂಬ ವಚನವು ಪ್ರಜಾತಂತ್ರಕ್ಕೆ ಸೂಕ್ತವಾಗಿ ಹೊಂದುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ‘ವೀರಶೈವ ಲಿಂಗಾಯತರು ಬಿಜೆಪಿಗೇ ಮತ ಹಾಕಬೇಕು’ ಎಂದು ಹೇಳಿರುವುದನ್ನು ಖಂಡಿಸಿರುವ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರ
ಸ್ವಾಮಿ, ‘ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿದ್ದು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸ
ಲಾಗುವುದು’ ಎಂದು ಗುಡುಗಿದ್ದಾರೆ. ಸಂತೋಷ, ಇದು ನಾಯಕರೊಬ್ಬರ ಸೂಕ್ತ ಪ್ರತಿಕ್ರಿಯೆ.

ಆದರೆ, ದುರದೃಷ್ಟವಶಾತ್ ಕುಮಾರಸ್ವಾಮಿ ಅವರಿಗೆ ನೆನಪು ಕೊಂಚ ಕೈಕೊಟ್ಟಿರಬೇಕು. ತಾವೇ ಮುಖ್ಯಮಂತ್ರಿಆಗಿದ್ದಾಗ ತಮ್ಮ ಪಕ್ಷದ ಒಬ್ಬ ನಾಯಕರು, ಸುಮಲತಾ ಅಂಬರೀಷ್ ಅವರ ಬಗ್ಗೆ ‘ಆಕೆ ಗೌಡ್ತಿ ಅಲ್ಲ, ನಾಯ್ಡು’ ಎಂದು ಹೇಳಿದ್ದರು. ಈ ಮೂಲಕ, ಮಂಡ್ಯದ ಜನರನ್ನು ಜಾತಿವಾದಿಗಳನ್ನಾಗಿಸಿ, ಮಂಡ್ಯವು ಒಕ್ಕಲಿಗರ ಸಾಮ್ರಾಜ್ಯ ಎಂಬ ಭಾವನೆ ಹುಟ್ಟುಹಾಕಲು ಪ್ರಯತ್ನಿಸಿದ್ದರು. ಇದು ಆಗ ಎಚ್‍ಡಿಕೆ ಅವರ ಗಮನಕ್ಕೆ ಯಾಕೆ ಬರಲಿಲ್ಲ? ಈಗ ಇವರು ಯಡಿಯೂರಪ್ಪ ಅವರ ವಿರುದ್ಧ ದೂರು ಕೊಡುವುದು ಸರಿಯೇ? ಮಂಡ್ಯ ಜನ ಈ ಜಾತಿವಾದಿ ಹುನ್ನಾರಕ್ಕೆ ಬಲಿಯಾಗದೆ ಸುಮಲತಾ ಅವರನ್ನು ಗೆಲ್ಲಿಸಿದ್ದು ನಾಡಿನ ಹೆಮ್ಮೆಯೇ ಸರಿ.

ಯಡಿಯೂರಪ್ಪ ಅವರು ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ‘ಆಡಳಿತದಲ್ಲಿ ಸಂವಿಧಾನದ ಆದರ್ಶಗಳನ್ನು ಅಳವಡಿಸಿಕೊಂಡು ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯ
ಲಾಗುವುದು’ ಎಂದಿದ್ದಾರೆ (ಪ್ರ.ವಾ., ನ. 27). ಹಾಗಾದರೆ ‘ವೀರಶೈವ ಲಿಂಗಾಯತರು ಬಿಜೆಪಿಗೇ ಮತ ಹಾಕಬೇಕು’ ಎಂದು ಅವರು ಮನವಿ ಮಾಡಿದ್ದು ಯಾಕೆ?

ಜಿ.ಕೆ.ಗೋವಿಂದರಾವ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT