ಬುಧವಾರ, ಜನವರಿ 22, 2020
28 °C

ಗೃಹಿಣಿಯೂ ಗೌರವಧನಕ್ಕೆ ಅರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಲಿಂಗ ಅಸಮಾನತೆಯನ್ನು ಹೋಗಲಾಡಿಸಬೇಕೆಂದರೆ ಎಲ್ಲ ಮಹಿಳೆಯರೂ ಗೌರವಯುತವಾದ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು. ಮಹಿಳೆಯರ ವೇತನಸಹಿತ ದುಡಿಮೆಗಿಂತ ವೇತನರಹಿತ ದುಡಿಮೆಯೇ ಹೆಚ್ಚಾಗಿದೆ. ಹೆಚ್ಚಿನ ಮಹಿಳೆಯರು, ಅದರಲ್ಲೂ ಸಹಜವಾಗಿ ಗೃಹಿಣಿಯರು ಶೋಷಣೆಗೆ ಒಳಗಾಗಿದ್ದಾರೆ. ಇದರಿಂದ ಅವರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ (ಸಂವಿಧಾನದ 21ನೇ ವಿಧಿ ಕೊಡಮಾಡುವ ಜೀವಿಸುವ ಹಕ್ಕು, ಖಾಸಗಿತನದ ಹಕ್ಕು, ಗೌರವಯುತವಾಗಿ ತನ್ನ ಆಯ್ಕೆಗೆ ತಕ್ಕಂತೆ ಬದುಕುವ ಹಕ್ಕನ್ನು ಕಸಿದುಕೊಂಡಂತಾಗಿದೆ).

ಈ ಮಹಿಳೆಯರು ಗೌರವದಿಂದ ತಲೆಯೆತ್ತಿ ಜೀವನ ನಡೆಸಬೇಕಾದರೆ, ಅವರಿಗೆಲ್ಲ ಗೌರವಧನ ನೀಡಬೇಕು. ಆಗ ಮಾತ್ರ ಮಹಿಳೆಯರನ್ನು ಶೋಷಣೆಯಿಂದ ಮುಕ್ತಗೊಳಿಸಬಹುದು ಮತ್ತು 21ನೇ ವಿಧಿಯನ್ನು
ಎತ್ತಿಹಿಡಿಯಬಹುದು.

ಗಾಯಿತ್ರಿ ಪೊಲೀಸಪಾಟೀಲ್, ಕೊಪ್ಪಳ

 

ಪ್ರತಿಕ್ರಿಯಿಸಿ (+)