ಶುಕ್ರವಾರ, ಮೇ 29, 2020
27 °C

ವಾಚಕರ ವಾಣಿ| ಗದ್ದಲವಿಲ್ಲದೆ ಉತ್ಸಾಹ ಹುಟ್ಟದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಪ್ಪಾಳೆ, ಪ್ರೋತ್ಸಾಹಕರ ಕೂಗು, ಉತ್ಸಾಹದ ಗದ್ದಲ ಇಲ್ಲದೇ ಆಡುವ ಆಟ ಒಂದು ಆಟವೇ? ಕ್ರೀಡೆ ಇರುವುದೇ ಮೈ ಮನಗಳ ಚುರುಕಿಗೆ, ಪ್ರೋತ್ಸಾಹದ ಚಿಲುಮೆ ಉಕ್ಕಿಸುವುದಕ್ಕೆ. ಅದು ಬಿಟ್ಟು, ಖಾಲಿ ಕ್ರೀಡಾಂಗಣಗಳಲ್ಲಿ ಕ್ರೀಡೆಯನ್ನು ಆಯೋಜಿಸಿದರೆ ಆಟಗಾರರು ಜೀವಚ್ಛವದಂತೆ ಕಾಣುತ್ತಾರೆ. ಪ್ರೇಕ್ಷಕರು ಇಲ್ಲದೆ ಬಿಕೋ ಎನ್ನುವ ಕ್ರೀಡಾಂಗಣದಲ್ಲಿ ಸೆಂಚುರಿ ಬಾರಿಸಿದರೂ ಒಂದೇ, ಒಂದೇ ರನ್‌ಗೆ ಔಟ್ ಆದರೂ ಒಂದೇ. ಪ್ರೋತ್ಸಾಹ ಇಲ್ಲದಿದ್ದರೆ ಗೆಲುವು ಎಂಬುದು ಆಟಗಾರರಿಗೆ ಒತ್ತಡದ ಟಾಸ್ಕ್ ಅನಿಸುತ್ತದೆ. ಖಾಲಿ ಕ್ರೀಡಾಂಗಣ ಅವರಲ್ಲಿ ಬೇಸರ, ಜುಗುಪ್ಸೆಯನ್ನು ಮೂಡಿಸಬಹುದು.

-ಮಂಜುನಾಥ್ ಜಿ., ಹಗರಿಬೊಮ್ಮನಹಳ್ಳಿ, ಬಳ್ಳಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು