ಶುಕ್ರವಾರ, ಜನವರಿ 17, 2020
22 °C

ಹೊಸ ಮಾದರಿಯ ಚಿಕ್ಕ ಚಿತ್ರಮಂದಿರ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಮೆಜೆಸ್ಟಿಕ್ ಅನ್ನು ಅಪ್ಪಟ ಕನ್ನಡ ಪ್ರದೇಶ ಎನ್ನಬಹುದು. ಆದರೆ ಈಗ ಅಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೊಮ್ಮೆ ಅಲ್ಲಿ ಏಕಪರದೆಯ ಮೂಲಕ ಚಿತ್ರಗಳನ್ನು ಪ್ರದರ್ಶಿಸುತ್ತಿದ್ದ 20ಕ್ಕೂ ಹೆಚ್ಚು ಚಿತ್ರಮಂದಿರಗಳಿದ್ದವು. ಈಗೀಗ ಏಕಪರದೆಯ ಚಿತ್ರಮಂದಿರಗಳಿಗೆ ಅದೇಕೋ ಬೇಡಿಕೆ ಕಡಿಮೆಯಾಗಿದೆ. ಬಹುಶಃ ಗೋದಾಮಿನಂತಿರುವ, ಆಧುನಿಕತೆಗೆ ತಕ್ಕಂತೆ ಬದಲಾಗದ ಚಿತ್ರಮಂದಿರಗಳು ಇದಕ್ಕೆ ಕಾರಣವಾಗಿರಬಹುದು. 

ಇಂದು ವಾರಕ್ಕೆ ಏಳೆಂಟು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಸಂಖ್ಯೆ ಕೆಲವೊಮ್ಮೆ ಹತ್ತನ್ನು ತಲುಪುವುದೂ ಇದೆ. ಮೆಜೆಸ್ಟಿಕ್ ಪ್ರದೇಶ ಪ್ರಯಾಣಿಕರಿಂದ ಗಿಜಿಗುಡುವ ಸ್ಥಳ. ಅಷ್ಟು ಸಾಲದೆಂಬಂತೆ ಸಿಟಿ ಬಸ್ ನಿಲ್ದಾಣ ಕೂಡ ಇಲ್ಲಿಯೇ ಇದೆ. ಈ ಪ್ರದೇಶದಲ್ಲಿ ಅತಿ ಹೆಚ್ಚು ದರ ವಿಧಿಸುವ ಚಿಕ್ಕ ಚಿತ್ರಮಂದಿರಗಳು ಬೇಕಾಗಿಲ್ಲ. ಕಡಿಮೆ ಆಸನಗಳ ಸಾಮರ್ಥ್ಯದ, ಹೊಸ ಮಾದರಿಯ, ಆದರೆ ಜನರ ಕೈಗೆಟುಕುವ ರೀತಿಯಲ್ಲಿ ಪ್ರವೇಶ ದರ ನಿಗದಿಗೊಳಿಸುವ ಚಿತ್ರಮಂದಿರಗಳ ಅವಶ್ಯಕತೆ ಇದೆ. ಇವು ಅತ್ಯಂತ ಸ್ಪರ್ಧಾತ್ಮಕವಾಗಿ ಪ್ರವೇಶ ದರಗಳನ್ನು ವಿಧಿಸುವ ಮೂಲಕ ಕಾರ್ಯ ಆರಂಭಿಸಿ, ಮತ್ತೊಮ್ಮೆ ಬೆಂಗಳೂರಿಗೆ ಶೋಭೆ ತರಲಿ.

ಚಂದ್ರಕಾಂತ ನಾಮಧಾರಿ, ಅಂಕೋಲಾ

ಪ್ರತಿಕ್ರಿಯಿಸಿ (+)