ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಕುಸಿಯಿತು ಜಿದ್ದಿನ ಆಶಾಗೋಪುರ

Last Updated 25 ನವೆಂಬರ್ 2019, 3:57 IST
ಅಕ್ಷರ ಗಾತ್ರ

ಮಹಾರಾಷ್ಟ್ರದಲ್ಲಿ ಶನಿವಾರ ದಿಢೀರನೆ ಸರ್ಕಾರ ರಚಿಸುವ ಮೂಲಕ ಬಿಜೆಪಿಯು ತಂತ್ರಗಾರಿಕೆಯಲ್ಲಿ ತಾನು ಮುಂದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸುಮಾರು ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಶನಿವಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಆಗುವ ಮೂಲಕ ತೆರೆ ಬೀಳಲಿದೆ ಎಂಬ ನಿರೀಕ್ಷೆ ಹುಸಿಯಾಗಿ, ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಅಭಿನಂದನಾರ್ಹ.

ಚುನಾವಣಾ ಫಲಿತಾಂಶ ಬಂದಾಗಿನಿಂದಲೂ ನಡೆದ ರಾಜಕೀಯದ ಹಲವು ಏಳುಬೀಳುಗಳ ನಡುವೆ ಕೊನೆಗೂ ಬಿಜೆಪಿಗೆ ಸಿಗಬೇಕಾದ ನ್ಯಾಯವು ಶಿವಸೇನಾ ಬದಲಾಗಿ ಎನ್‍ಸಿಪಿಯಿಂದ ಸಿಕ್ಕಿದೆ. ಮಹಾರಾಷ್ಟ್ರ
ದಲ್ಲಿ ತನ್ನ ನೇತೃತ್ವದಲ್ಲಿ ಸರ್ಕಾರ ರಚಿಸಬೇಕೆಂಬ ಶಿವಸೇನಾದ ಜಿದ್ದಿನ ಆಶಾಗೋಪುರ ರಾತ್ರೋರಾತ್ರಿ ಕುಸಿದುಬಿದ್ದಿದೆ. ತನ್ನ ಕಾಲ ಮೇಲೆ ಸ್ವತಃ ಕೊಡಲಿ ಹಾಕಿಕೊಂಡ ಶಿವಸೇನಾವು ದಿಢೀರ್‌ ಬೆಳವಣಿಗೆಯಿಂದ ತಲೆ ತುರಿಸಿಕೊಳ್ಳುತ್ತಿದೆ. ರಾಜಕೀಯ ಕ್ಷೇತ್ರದಲ್ಲಿ ಇದೊಂದು ಪಾಠ ಅಲ್ಲವೇ?

-ಶರಣು ಸಲಗರ,ಬಸವಕಲ್ಯಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT