ಶುಕ್ರವಾರ, ಜೂನ್ 5, 2020
27 °C

ವಾಚಕರ ವಾಣಿ| ಎಲ್ಲರೂ ಜಿಗಣೆಗಳೇ ಆತನ ನೆತ್ತರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೆಗಳ ಒತ್ತುವರಿ ತೆರವಿಗಾಗಿ ತಮಗೆ ಮನವಿ ಸಲ್ಲಿಸಲು ಬಂದಿದ್ದ ರೈತ ಮಹಿಳೆಯರನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಟುಮಾತುಗಳಲ್ಲಿ ನಿಂದಿಸಿರುವುದು (ಪ್ರ.ವಾ., ಮೇ 21) ಅಚ್ಚರಿ ಹುಟ್ಟಿಸುವ ಸಂಗತಿಯೇನಲ್ಲ. ಸಚಿವರು ಹೀಗೆ ಮಾತನಾಡಲು ಅವರಿಗೆ ಈಗ ಒದಗಿಬಂದಿರುವ ಅಧಿಕಾರ ಕಾರಣವೇ ಹೊರತು ಇನ್ನೇನೂ ಅಲ್ಲ.

ಸಚಿವರಾಗುವುದಕ್ಕೂ ಮೊದಲು ರೈತರ ಪರವಾಗಿ ವಿಧಾನಸಭೆಯಲ್ಲಿ ಮನಮಿಡಿಯುವಂತೆ ಇವರು ಮಾತನಾಡಿದ್ದರು. ಈಗ, ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿದ ರೈತ ಸಂಘದವರನ್ನು ದೂರ ಕಳುಹಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ‘ನೆವವು ಏನಾದರೇನು, ಸುಲಿಗೆ ರೈತನದು, ಎಲ್ಲರೂ ಜಿಗಣೆಗಳೇ ಆತನ ನೆತ್ತರಿಗೆ’ ಎಂದು ರಾಷ್ಟ್ರಕವಿ ಕುವೆಂಪು ಎಂದೋ ಹೇಳಿದ ಮಾತುಗಳು ಈಗಲೂ ಪ್ರಸ್ತುತವಾಗಿರುವುದು, ನಮ್ಮ ಅನ್ನದಾತನ ದುರ್ದೈವವೇ ಸರಿ.

-ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು