ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಬಿಕರಿಯಾದರೆ…
ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನವು ಒಂದು ಕೋಟಿ ರೂಪಾಯಿಗೆ ಹರಾಜಾಗುತ್ತಿದೆ ಎಂದಾದರೆ (ಪ್ರ.ವಾ., ಡಿ. 11), ಇದರ ವಿರುದ್ಧ ಅಸಹಕಾರ ಚಳವಳಿ ನಡೆಯುವುದೇ ಅನುಮಾನ. ಏಕೆಂದರೆ ಯಾರಿಗೆ ತಾನೇ ಹಣ ಬೇಡವಾಗಿರುತ್ತದೆ? ಕೇವಲ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೇ ಒಂದು ಕೋಟಿ ರೂಪಾಯಿ ಕೊಡಲು ಒಪ್ಪುವ ಅಭ್ಯರ್ಥಿ, ಮುಂದೆ ಹಣ ಮಾಡಲು ಏನೆಲ್ಲಾ ಮಾಡಬಹುದು?
ಈ ರೀತಿ ತನ್ನ ಅನುಕೂಲಕ್ಕಾಗಿ ಎಲ್ಲವನ್ನೂ ಮಾಡಿಕೊಳ್ಳುವ ವ್ಯಕ್ತಿ, ಗ್ರಾಮಸ್ಥರಿಗೆ ಯಾವ ರೀತಿಯ ಸೇವೆ ಮಾಡಬಹುದು? ತನ್ನ ಆಡಳಿತದ ಅವಧಿಯಲ್ಲಿ ಆತ ತಾನು ಖರ್ಚು ಮಾಡಿದ ಒಂದು ಕೋಟಿಗಿಂತ ಹೆಚ್ಚಿಗೆ ಹಣ ಮಾಡಿಕೊಳ್ಳದಿದ್ದರೆ ಆತನಿಗೆ ಸಮಾಧಾನವೂ ಇರುವುದಿಲ್ಲ. ಹೀಗೆ ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ಹಣ ಕೊಟ್ಟು ಕೊಳ್ಳಲು ಮುಂದಾಗುವವರಿಗೆ ಕಠಿಣ ಶಿಕ್ಷೆ ನೀಡಬೇಕು.
- ಬಾಲಕೃಷ್ಣ ಎಂ.ಆರ್., ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.