ಶನಿವಾರ, ಜುಲೈ 31, 2021
20 °C

ವಾಚಕರ ವಾಣಿ: ಇದು ಲಾಕ್‌ಡೌನ್‌ ಮನರಂಜನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದಾಗ, ರಾಜಕೀಯ ಇಷ್ಟು ಕೀಳುಮಟ್ಟಕ್ಕೆ ತಲುಪಿತೇ ಎನಿಸುತ್ತದೆ. ಸರ್ಕಾರದ ಭಾಗವಾಗಿರುವ ಒಬ್ಬ ಹಾಲಿ ಸಚಿವರನ್ನು, ಅದೇ ಪಕ್ಷದ ಹಾಲಿ ಶಾಸಕರೊಬ್ಬರು ‘ಅವನೊಬ್ಬ ಕಳ್ಳ, 420. ಆತ ಭೂ ಹಗರಣದಲ್ಲಿ ಜೈಲಿಗೆ ಹೋಗಬೇಕಿತ್ತು, ನಮ್ಮ ಪಕ್ಷಕ್ಕೆ ಬಂದು ಬಚಾವ್ ಆಗಿದ್ದಾನೆ’ ಎನ್ನುತ್ತಾರೆ.

ಮತ್ತೊಬ್ಬ ಶಾಸಕರು ‘ಇವನು ಪಕ್ಷದಿಂದ ಪಕ್ಷಕ್ಕೆ ಹಾರುವ ಕಪ್ಪೆ’ ಎಂದು ಜರೆಯುತ್ತಾರೆ. ಹೀಗೆಲ್ಲಾ ಬಾಯಿಗೆ ಬಂದಂತೆ ಮಾತನಾಡುವ ಇವರಿಗೆ, ತಾವು ಹೀಗಳೆಯುತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಅವರ ಹಿನ್ನೆಲೆ ಗೊತ್ತಿರಲಿಲ್ಲವೇ? ಅಧಿಕಾರಕ್ಕಾಗಿ ನಡೆಯುತ್ತಿರುವ ಈ ಎಲ್ಲಾ ಆಟಗಳು ಸಾರ್ವಜನಿಕರಿಗಾಗಿ ನಡೆಯುತ್ತಿರುವ ‘ಲಾಕ್‌ಡೌನ್ ಮನರಂಜನೆ’.
-ಬೂಕನಕೆರೆ ವಿಜೇಂದ್ರ, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.