ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ಸರ್ಕಾರಿ ನೌಕರರಿಗೆ ಕಡಿವಾಣ

Last Updated 26 ಜುಲೈ 2022, 19:31 IST
ಅಕ್ಷರ ಗಾತ್ರ

‌‌ಸರ್ಕಾರಿ ನೌಕರರು ಕಚೇರಿ ಅವಧಿಯಲ್ಲಿ ಪೂರ್ವಾನುಮತಿ ಇಲ್ಲದೇ ಹೊರಗೆ ಹೋಗುವುದು ಕಂಡುಬಂದಲ್ಲಿ ಅಂತಹವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶ ಹೊರಡಿಸಿರುವುದು ಶ್ಲಾಘನೀಯ.

ಇತ್ತೀಚಿನ ದಿನಗಳಲ್ಲಿ ಶೇಕಡ 90ರಷ್ಟು ಅಧಿಕಾರಿಗಳು ಮತ್ತು ನೌಕರರು ಕಚೇರಿಯ ಸಮಯ ಪಾಲನೆ ಮಾಡುವುದಿಲ್ಲ. ಇಷ್ಟ ಬಂದಾಗ ಕಚೇರಿಗೆ ಬರುತ್ತಾರೆ. ಹೇಳದೆ ಕೇಳದೆ ಹೊರಗೆ ಹೋಗಿರುತ್ತಾರೆ. ಸಮಯ ಪಾಲನೆ ನಿಯಮ ಬಿಗಿಯಾಗಿರಬೇಕು. ಯಾವುದೇ ಕಾರಣದಿಂದಲೂ ಸಡಿಲಗೊಳಿಸಬಾರದು. ಇದರಿಂದ ಸ್ವಲ್ಪಮಟ್ಟಿಗಾದರೂ ಆಡಳಿತ ಸುಧಾರಣೆ ಸಾಧ್ಯವಾದೀತು.

- ಕೆ.ಎಸ್. ಕುಮಾರಸ್ವಾಮಿ,ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT