ಮಂಗಳವಾರ, ಜುಲೈ 27, 2021
25 °C

ವಾಚಕರ ವಾಣಿ: ಮೈಸೂರು ಜಿಲ್ಲಾಧಿಕಾರಿಯ ಬಗ್ಗೆ ರಾಜಕಾರಣಿಗಳ ತಕರಾರೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ದಕ್ಷ ಮತ್ತು ಸೇವಾ ತುಡಿತ ಇರುವ ಅಧಿಕಾರಿ ಎಂಬುದನ್ನು ತಮ್ಮ 11 ವರ್ಷಗಳ ಸೇವಾವಧಿಯಲ್ಲಿ ಸಾಬೀತುಪಡಿಸಿದ್ದಾರೆ. ಈಗ ಮೈಸೂರು ಜಿಲ್ಲೆಯಲ್ಲಿ ಅವರು 24×7 ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ. ಆದರೂ ಕೆಲವು ಶಾಸಕರು, ಸಂಸದರು ಇವರ ವಿರುದ್ಧ ಮುಗಿಬೀಳುತ್ತಿದ್ದಾರೆ.

ಚಾಮರಾಜನಗರದಲ್ಲಿ 24 ಮಂದಿ ಕೋವಿಡ್‌ಪೀಡಿತರು ಸಕಾಲದಲ್ಲಿ ಆಕ್ಸಿಜನ್‌ ಲಭ್ಯವಾಗದೆ ಸತ್ತಾಗ ಅದಕ್ಕೆ ರೋಹಿಣಿಯವರೇ ಕಾರಣವೆಂದರು, ಇವರನ್ನು ಎತ್ತಂಗಡಿ ಮಾಡಿ ಎಂದರು, ನಾವು ಎದುರಿಸುವ ಒಂದೊಂದು ಚುನಾವಣೆ ಒಂದೊಂದು ಐಎಎಸ್ ಪರೀಕ್ಷೆಗೆ ಸಮ ಎಂದರು, ಜಿಲ್ಲೆಯಲ್ಲಿ ರಚನೆಗೊಂಡ ಕ್ರಿಯಾಪಡೆಗೆ ಜಿಲ್ಲಾಧಿಕಾರಿಯ ಹೆಸರೇ ಬೇಡವೆಂದರು. ಜೊತೆಗೆ ಇವರು ತಾಸುಗಟ್ಟಲೆ ಅಧಿಕಾರಿಗಳ ಸಭೆ ನಡೆಸುವ ಬದಲು ಹಳ್ಳಿಗಳಿಗೆ ಭೇಟಿ ನೀಡಲಿ ಎನ್ನುತ್ತಿದ್ದಾರೆ. ಅಂದರೆ ಈ ಅಧಿಕಾರಿ ಅವರ ಅಧಿಕಾರ ಚಲಾಯಿಸಲು, ಆಡಳಿತ ನಡೆಸಲು ಶಾಸಕರಿಗೆ, ಸಂಸದರಿಗೆ ಹೊಂದಿಕೊಂಡು ನಡೆಯಬೇಕೇ? ಈ ಜಿಲ್ಲಾಧಿಕಾರಿಯ ಬಗ್ಗೆ ಇಲ್ಲಿನ ನಾಗರಿಕರಿಗೆ ಏನೇನೂ ತಕರಾರಿಲ್ಲ. ಇರುವುದು ರಾಜಕಾರಣಿಗಳಿಂದ ಮಾತ್ರ. ಇದಕ್ಕೆ ಏನೆನ್ನುವುದು?

-ಎಂ.ಕೆ.ವಾಸುದೇವರಾಜು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು