ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಲಂಚ ಕೊಡುವುದೆಂದರೆ ಸುಮ್ಮನೆಯೇ?!

Last Updated 10 ಮೇ 2022, 22:30 IST
ಅಕ್ಷರ ಗಾತ್ರ

₹40 ಲಕ್ಷದಿಂದ ಕೋಟಿಯವರೆಗೆ ಲಂಚ ಕೊಟ್ಟು ಸಬ್ಇನ್‌ಸ್ಪೆಕ್ಟರ್ ಆಗಿಬಿಡುತ್ತಿದ್ದರಲ್ಲಾ ಎಂದು ಹಿಡಿಶಾಪ ಹಾಕುವವರೇ ಎಲ್ಲರೂ... ಕೆಲಸ ಪಡೆದ ಮೇಲೆ ಅವರು ಪಡುವ ಪಾಡು ಗೊತ್ತೇನು ನಿಮಗೆ...?! ಪ್ರೊಬೇಷನರಿ ಅವಧಿಯ ಎರಡು ವರ್ಷದವರೆಗೆ ಉಸಿರು ಬಿಗಿ ಹಿಡಿದು ತುಟಿಕಚ್ಚಿಕೊಂಡಿರಬೇಕು. ಕೊಟ್ಟ ದುಡ್ಡು ಬಾಚಲು ಒಂದೊಂದು ದಿನವೂ ಮೈಯೆಲ್ಲಾ ಕಣ್ಣಾಗಿ ಹೋರಾಡಬೇಕು. ಕಾವಿಗೆ ಸಲಾಮು ಹಾಕುತ್ತಾ, ಖಾದಿಗಳಿಗೆ ಗುಲಾಮರಾಗುತ್ತಾ, ಸಾಮಾನ್ಯರನು ಸುಲಿಗೆ ಮಾಡುತ್ತಾ ಲಂಚದ ಹಣವನು ಲಂಚದಿಂದಲೇ ಮಾಡಿಕೊಳ್ಳಬೇಕು...

ಸುಳ್ಳು ಎಫ್‌ಐಆರ್, ಪೊಳ್ಳು ಎನ್‌ಕೌಂಟರ್, ಬ್ರೋಕರ್‌ಗಳೊಂದಿಗೆ ಅಂದರ್‌ಬಾಹರ್ ಆಟಗಳ ಆಡಬೇಕು, ಕಳ್ಳತನವ ಮಾಡಿಸಬೇಕು, ಒಳ್ಳೆತನಗಳ ಕೋರ್ಟಿಗಲೆಸಬೇಕು, ಎನ್‌ಕ್ವೈರಿಗೆ ಸಿದ್ಧರಾಗಿರಬೇಕು, ಸಸ್ಪೆಂಡ್‌ಗೆ ಬದ್ಧರಾಗಿರಬೇಕು, ಅಕ್ರಮ ಸಂಪಾದನೆಯ ಸಕ್ರಮ ಮಾಡಲು ವಿಕ್ರಮನಂತೆ ಪೋಸು ಕೊಡುತಿರಬೇಕು. ಎಷ್ಟು ಕಷ್ಟ ನೋಡಿ, ಲಂಚ ಕೊಟ್ಟು ಇನ್‌ಸ್ಪೆಕ್ಟರ್ ಆಗುವುದು!

ಜೆ.ಬಿ. ಮಂಜುನಾಥ,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT