ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮಹಿಳೆಯರಿಗೆ ಸಿಗಲಿ ಪ್ರಾಶಸ್ತ್ಯ

Last Updated 1 ಮಾರ್ಚ್ 2022, 22:30 IST
ಅಕ್ಷರ ಗಾತ್ರ

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಮೊದಲ ಅಧ್ಯಕ್ಷೆಯಾಗಿ ಮಾಧವಿ ಪುರಿ ಬುಚ್ ಅವರು ನೇಮಕಗೊಂಡಿರುವುದು ಸಮಾಜಕ್ಕೆ ಆದರ್ಶವಾಗಬೇಕು. ಹೆಣ್ಣಿನ ಬಗೆಗಿರುವ ಕೀಳರಿಮೆ ಇನ್ನೂ ನಮ್ಮ ಸಮಾಜದಿಂದ ಪೂರ್ತಿ ತೊಲಗಿಲ್ಲ. ಹೆಣ್ಣು ಮನಸ್ಸು ಮಾಡಿದರೆ ಪುರುಷನಿಗೆ ಸಮಾನವಾಗಿ ಉನ್ನತ ಸ್ಥಾನಕ್ಕೆ ಏರಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಹೀಗೆ ಪ್ರತೀ ರಂಗದಲ್ಲೂ ಮಹಿಳೆಯರಿಗೆ ಪ್ರಾಶಸ್ತ್ಯ ನೀಡಬೇಕು. ಈ ಮೂಲಕ ಅಸಮಾನತೆ ಪಿಡುಗನ್ನು ತೊಡೆಯಬೇಕು. ಯುವತಿಯರು ಇದರಿಂದ ಪ್ರೇರಣೆ ಪಡೆದು ಎಲ್ಲಾ ರಂಗಗಳಲ್ಲಿ ಸಾಮರ್ಥ್ಯ ಪ್ರದರ್ಶಿಸಿ, ತಾವು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಸಾಬೀತುಪಡಿಸಬೇಕು.

ಅಂಬಿಕಾ ಜಿ.ಕೆ.,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT