ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ: ವ್ಯರ್ಥ ಕಸರತ್ತು ಏಕೆ?

Last Updated 24 ಜುಲೈ 2022, 19:30 IST
ಅಕ್ಷರ ಗಾತ್ರ

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಂಥ ಉನ್ನತ ಹುದ್ದೆಗಳಿಗೆ ಚುನಾವಣೆ ಘೋಷಣೆಯಾದಾಗ ವಿರೋಧ ಪಕ್ಷಗಳು ತಮಗೆ ಸಂಖ್ಯಾಬಲ ಇಲ್ಲದೇ ಇದ್ದ ಸಂದರ್ಭದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದರಿಂದ ಸಾಧಿಸುವುದು ಏನೂ ಇರುವುದಿಲ್ಲ. ಅದರ ಬದಲು, ಒಮ್ಮತದ ಆಯ್ಕೆಗೆ ಅವಕಾಶ ಮಾಡಿಕೊಡುವ ಮೂಲಕ ಈ ಹುದ್ದೆಗಳ ಘನತೆ ಹೆಚ್ಚಿಸುವುದು ಒಳಿತು.

ಮತದಾನಕ್ಕೆ ಮೊದಲೇ ಫಲಿತಾಂಶದ ಹಣೆಬರಹ ಗೊತ್ತಿರಬೇಕಾದರೆ ಕಣಕ್ಕೆ ಇಳಿಸಿ, ಮತಯಾಚನೆಯ ಕಸರತ್ತು ನಡೆಸುವುದರಲ್ಲಿ ಹೆಚ್ಚಿನ ಅರ್ಥ ಇರುವುದಿಲ್ಲ. ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳ್ಳಲು ಇಂತಹ ಚುನಾವಣೆಗಳು ಯಾವುದೇ ರೀತಿಯಲ್ಲೂ ನೆರವಾಗುವುದಿಲ್ಲ.

- ಕೆ.ಪಿ. ವಿಷ್ಣುವರ್ಧನ,ಕೊಡಗವಳ್ಳಿ ಹಟ್ಟಿ, ಹೊಳಲ್ಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT