ಉತ್ತರ ಕನ್ನಡ ಜಿಲ್ಲೆಯ ವಿಭಜನೆಯ ಮಾತು ಇಂದು ನಿನ್ನೆಯದಲ್ಲ. ಶಿರಸಿ– ಸಿದ್ದಾಪುರದವರು ಮತ್ತೊಂದು ಜಿಲ್ಲೆಗೆ ಬೇಡಿಕೆ ಇಡುವುದು ಹಾಗೂ ಕರಾವಳಿ ಭಾಗದವರು ವಿಭಜನೆ ಬೇಡವೆಂದು ಹೇಳುವುದು ಹಲವಾರು ವರ್ಷಗಳಿಂದಕೇಳಿಬರುತ್ತಿದೆ. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮೊನ್ನೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿಯವರು ಉತ್ತರ ಕನ್ನಡ ಜಿಲ್ಲೆ ವಿಭಜನೆ ಆಗಲಿ ಅಂತ ಅಂಕೋಲಾದಲ್ಲಿ ಹೇಳಿ ಹೋಗಿದ್ದಾರೆ. ಇದಕ್ಕೆ ಟೀಕೆಗಳು ಕೂಡ ಬಂದಿವೆ.

ಪರ– ವಿರೋಧದ ಮಾತುಗಳು ಒತ್ತಟ್ಟಿಗಿರಲಿ. ಅಭಿಪ್ರಾಯ ವ್ಯಕ್ತಪಡಿಸಲು ಪ್ರತಿಯೊಬ್ಬರೂ ಸ್ವತಂತ್ರರು. ಆದರೆ, ಈ ಜಿಲ್ಲೆಯ ವಿಭಜನೆಯಿಂದ ಆಗುವ ಲಾಭ– ನಷ್ಟದ ಕುರಿತು ವೈಜ್ಞಾನಿಕ ನೆಲೆಯಲ್ಲಿ ಚರ್ಚಿಸುವುದು ಅಗತ್ಯ ಅಂತ ಈಗ ಅನಿಸುತ್ತದೆ.

ಚಂದ್ರಕಾಂತ ನಾಮಧಾರಿ,ಅಂಕೋಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.