ಮಂಗಳವಾರ, ನವೆಂಬರ್ 12, 2019
24 °C

ಹಬ್ಬದ ಖುಷಿ ಮರೆಸುವ ಪರೀಕ್ಷೆ

Published:
Updated:

ಭಾರತೀಯ ಜೀವ ವಿಮಾ ನಿಗಮದಲ್ಲಿನ (ಎಲ್ಐಸಿ) ವಿವಿಧ ಸಹಾಯಕ ಹುದ್ದೆಗಳಿಗೆ ಇದೇ 30 ಹಾಗೂ 31ರಂದು ಪರೀಕ್ಷೆ ನಿಗದಿಯಾಗಿದೆ.

ಈ ಮೊದಲು ಇದೇ ತಿಂಗಳ 22ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಏಕಾಏಕಿ ಮುಂದೂಡಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಿಗದಿಪಡಿಸಲಾಗಿದೆ. ಪರೀಕ್ಷೆಯು ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದು, ಹಬ್ಬದ ಸಂದರ್ಭದಲ್ಲಿ ವಿವಿಧ ಊರುಗಳಿಂದ ಬರಲು ರೈಲು ಟಿಕೆಟ್‌ ಸಿಗುವುದೇ ಕಷ್ಟ.

ಇಲ್ಲದಿದ್ದರೆ, ದುಪ್ಪಟ್ಟು ಹಣ ತೆತ್ತು ಬಸ್ಸಿನಲ್ಲಿ ರಾಜಧಾನಿಗೆ ಬರಬೇಕಾಗಿದೆ. ಹಬ್ಬದ ಸಂಭ್ರಮವನ್ನು ಬದಿಗೊತ್ತಿ ಪರೀಕ್ಷೆಗೆ ಹಾಜರಾಗಬೇಕಾಗಿರುವುದು ಮತ್ತೊಂದು ಬೇಸರದ ಸಂಗತಿ. ಹೀಗಾಗಿ, ನಿಗಮವು ಪರೀಕ್ಷೆಯನ್ನು ಮುಂದೂಡಿ ಅಭ್ಯರ್ಥಿಗಳ ಸಂಕಷ್ಟ ಪರಿಹರಿಸಬೇಕು.

– ರಮೇಶ್, ಗೋಣಿಕೊಪ್ಪ, ಕೊಡಗು

ಪ್ರತಿಕ್ರಿಯಿಸಿ (+)