ಶುಕ್ರವಾರ, ಅಕ್ಟೋಬರ್ 18, 2019
20 °C

ಮದ್ಯಪಾನ ನಿಷೇಧವಾಗಲಿ

Published:
Updated:

ಗಾಂಧೀಜಿ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಗಾಂಧಿ ಜಯಂತಿಯಂದು ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇವುಗಳ ಜೊತೆಗೆ ಈಗ ಆಗಬೇಕಿರುವುದು  ಮದ್ಯಪಾನ ನಿಷೇಧ ಕಾರ್ಯಕ್ರಮ. ಅದೊಂದು ರಾಷ್ಟ್ರೀಯ ನೀತಿಯಾಗಬೇಕು.

ಕುಡಿತಕ್ಕೆ ಬಲಿಯಾಗಿ ನಾನಾ ತೊಂದರೆಗಳಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಮದ್ಯಪಾನ ನಿಷೇಧದಿಂದ ಉಂಟಾಗುವ ವಿತ್ತೀಯ ಕೊರತೆಯನ್ನು ಗಮನಿಸದೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮದ್ಯಪಾನ ನಿಷೇಧ ಜಾರಿ ಮಾಡಬೇಕು. ಆಗ ಗಾಂಧಿಯವರ ಸಂಪೂರ್ಣ ಮದ್ಯಪಾನ ನಿಷೇಧದ ಕನಸನ್ನು ನನಸು ಮಾಡಿದಂತೆ ಆಗುತ್ತದೆ.

– ಉದಯ ಮ. ಯಂಡಿಗೇರಿ, ಧಾರವಾಡ

Post Comments (+)