ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಮನ್ನಾ: ಸರ್ಕಾರದ ಸೂಚನೆ

Last Updated 4 ಜೂನ್ 2019, 17:51 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ವಾಣಿ ಶ್ರೀಹರ್ಷ ಎಂಬುವರು ‘ಇದು ಯಾವ ನ್ಯಾಯ ಸ್ವಾಮಿ’ ಎಂದು ಪ್ರಶ್ನಿಸಿ ಪತ್ರ ಬರೆದಿದ್ದಾರೆ (ವಾ.ವಾ., ಜೂನ್‌ 3). ಸಾಲ ಪಡೆದವರ ಮಾಹಿತಿ ಪಡೆದು ಪರಿಶೀಲಿಸಲಾಗುತ್ತಿದೆ. ಸಾಲ ಮನ್ನಾ ಯೋಜನೆಯ ಅರ್ಹತಾ ಮಾನದಂಡಗಳೇನು ಹಾಗೂ ಸಾಲ ಪಡೆದ ರೈತರು ಅರ್ಹತೆ ಹೊಂದಿದ್ದಾರೆಯೇ ಇಲ್ಲವೇ ಎಂಬುದರ ಕುರಿತುಎಲ್ಲ ಬ್ಯಾಂಕುಗಳ ಪ್ರತಿ ಶಾಖೆಯ ವ್ಯವಸ್ಥಾಪಕರಿಗೆ ಅರಿವು ಮೂಡಿಸುವಂತೆರಾಜ್ಯ ಬ್ಯಾಂಕರುಗಳ ಸಮಿತಿಯ ಸದಸ್ಯರಿಗೆ ತಿಳಿಸಲಾಗಿದೆ. ಅಲ್ಲದೆ ಅರ್ಹ ಫಲಾನುಭವಿಗಳಿಗೆ ನೋಟಿಸ್‌ ಕಳುಹಿಸದಂತೆ ಸೂಚಿಸಲಾಗಿದೆ.

ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ರೈತರು http://clws.karnataka.gov.in ಇಲ್ಲಿ ಪಡೆಯಬಹುದು. ಈ ವೆಬ್‌ಸೈಟ್‌ಗೆ ತೆರಳಿದ ಬಳಿಕ, Citizen ಎಂದು ಕ್ಲಿಕ್‌ ಮಾಡಿ, ನಂತರ ‘FARMER WISE ELIGIBILITY STATUS’ ಕ್ಲಿಕ್ಕಿಸಿ, ಜಿಲ್ಲೆ, ತಾಲ್ಲೂಕು, ಬ್ಯಾಂಕ್‌ ಆಯ್ಕೆ ಮಾಡಿದರೆ ಆಗ, ಸಾಲ ಮನ್ನಾ ಅರ್ಹತೆಯ ವಿವರ ದೊರೆಯುತ್ತದೆ. ತೊಡಕುಗಳಿದ್ದಲ್ಲಿ ಆಯಾ ಜಿಲ್ಲೆಯ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಅಥವಾ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದು.

ಎಚ್‌.ಬಿ.ದಿನೇಶ್‌,ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT