ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವುದನ್ನೇ ಮರೆತ ಮತದಾರ

Last Updated 8 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರನ್ನು ಬಾಧಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ನಮ್ಮ ಮತದಾರರು ಪ್ರಶ್ನಿಸಬೇಕಾದದ್ದು ಸಕಾಲವಾಗಿರುತ್ತದೆ.

ಕಳೆದ 5 ವರ್ಷಗಳ ಕಾಲ ಆಡಳಿತ ನಡೆಸಿದವರನ್ನು ನಿರುದ್ಯೋಗದ ಸಮಸ್ಯೆಯನ್ನು ಉಲ್ಬಣಗೊಳಿಸಲು ನೀವು ಕಾರಣರಾಗಿರುತ್ತೀರಿ. ಈ ಸಮಸ್ಯೆಯನ್ನೇಕೆ ಪರಿಹರಿಸಲಿಲ್ಲವೆಂದು ಕೇಳಬೇಕಾಗುತ್ತದೆ. ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿದಾಗ ತಾವು ಯಾವ ಕ್ರಮ ಕೈಗೊಂಡಿರಿ ಎಂದು ಪ್ರಶ್ನಿಸಬೇಕಾಗುತ್ತದೆ. 5 ವರ್ಷದಲ್ಲಿ ಎಷ್ಟು ಕೋಟಿ ಉದ್ಯೋಗವನ್ನು ನೀಡಿದ್ದೀರಿ ಎಂದು ಕೇಳಬೇಕಾಗುತ್ತದೆ. ನೀವು ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ಇದ್ದ ಎಲ್ಲಾ ಸಾಲಗಳ ಮೊತ್ತವೆಷ್ಟು ಇಂದು ದೇಶಕ್ಕಿರುವ ಒಟ್ಟು ಸಾಲದ ಮೊತ್ತ ಎಷ್ಟು ಎಂದು ಕೇಳಬೇಕಾಗಿದೆ.ಬದುಕಿನ ಮೂಲಭೂತ ವಿಚಾರಗಳನ್ನು ಪ್ರಶ್ನೆ ಮಾಡದಂತೆ ಜನರ ದಿಕ್ಕು ತಪ್ಪಿಸಿ, ಭಾವನಾತ್ಮಕವಾದ ಸಂಗತಿಗಳನ್ನಷ್ಟೇ ಮಾತನಾಡುತ್ತಾ, ನಿರುದ್ಯೋಗಿ ಯುವಕರ ಮನಸ್ಸಿನಲ್ಲಿ ದ್ವೇಷದ ಭಾವನೆ ಬಿತ್ತಿ ಅವರನ್ನು ನಿಮ್ಮ ಅಸ್ತ್ರಗಳನ್ನಾಗಿಸುತ್ತಿದ್ದೀರಿ. ಇವುಗಳ ಬಗ್ಗೆ ಪ್ರಶ್ನಿಸುವ ಕಾಲ ಬಂದಾಗಿದೆ. ಈಗಲೂ ಸುಮ್ಮನೆ ಕುಳಿತರೆ ಮತ್ತೊಮ್ಮೆ ದೇಶ ಶತಮಾನಗಳಷ್ಟು ಹಿಂದಕ್ಕೆ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT