ಮಲೆನಾಡಿನ ಸೊಬಗು ನೇಪಥ್ಯಕ್ಕೆ ಸರಿದ ಬಗೆಯನ್ನು ವಿವರಿಸಿರುವ ಸತೀಶ್ ಜಿ.ಕೆ. ತೀರ್ಥಹಳ್ಳಿ ಅವರ ಲೇಖನ (ಸಂಗತ, ಮಾರ್ಚ್ 13) ಸಕಾಲಿಕವಾಗಿದ್ದು, ಎಚ್ಚರಿಕೆಯ ಗಂಟೆಯಂತಿದೆ. ಶಿವಮೊಗ್ಗ- ತೀರ್ಥಹಳ್ಳಿ ನಡುವೆ ರಸ್ತೆಯ ಇಕ್ಕೆಲಗಳಲ್ಲೂ ಹಸಿರು ಹೊದ್ದ ಗಿಡಮರಗಳು ಕಣ್ಮರೆಯಾಗಿದ್ದು ಒಂದು ಉದಾಹರಣೆ ಮಾತ್ರ. ಈ ತರಹ ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ಸೊರಬ ತಾಲ್ಲೂಕುಗಳಲ್ಲಿ ಅದೆಷ್ಟೋ ಹಸಿರು ಕಾಣೆಯಾಗಿದೆ.

ಪ್ರವಾಸೋದ್ಯಮದ ಹೆಸರಿನಲ್ಲಿ ಅನಧಿಕೃತ ರೆಸಾರ್ಟ್ ಗಳು, ಹೋಮ್ ಸ್ಟೇಗಳು, ಅಕ್ರಮ ಮರಳು ದಂಧೆ, ಕಲ್ಲು ಕ್ವಾರಿ, ಅಕೇಶಿಯಾ- ನೀಲಗಿರಿ ಮರಗಳು, ಶುಂಠಿ ಬೆಳೆ ಎಲ್ಲವೂ ಧನದ ದಾಹಕ್ಕೆ ಮಲೆನಾಡ ಮಗ್ಗುಲನ್ನೇ ಮುರಿ ದಿವೆ. ದೈತ್ಯ ಜೆಸಿಬಿ ಯಂತ್ರಗಳು, ಕೊಳವೆಬಾವಿ ಕೊರೆಯುವ ಬೋರ್ವೆಲ್ ಲಾರಿಗಳು ಜನರ ನಿದ್ದೆಗೆಡಿಸಿವೆ. ಇವೆಲ್ಲವೂ ಅಧಿಕಾರಶಾಹಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲೇ ನಡೆಯುತ್ತಿರುವುದು ವಿಷಾದನೀಯ.

ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.