ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿ ತಿಂದು ನೋಡಿ!

Last Updated 1 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಮಲೆನಾಡಿನ ಅಪ್ಪೆಮಿಡಿ ಮಾವಿನಕಾಯಿಗೆ ಅಂಚೆ ಇಲಾಖೆ ಮಾನ್ಯತೆ ಸಿಕ್ಕಿದೆ (ಪ್ರ.ವಾ., ಸೆ. 1). ದೇಶದಾದ್ಯಂತ ಜನರಿಗೆ ಪರಿಚಯಿಸಲು ಅಪ್ಪೆಮಿಡಿಯ ವಿಶೇಷ ಲಕೋಟೆ ಬಿಡುಗಡೆ ಮಾಡಿದ್ದು ಶ್ಲಾಘನೀಯ ಹಾಗೂ ಇದರ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಇಲಾಖೆಯು ವಿಶೇಷ ನೆರವು ಕೂಡ ಕೊಡಲು ಮುಂದೆ ಬಂದಿರುವುದು ಸಂತಸದ ವಿಷಯ. ಇದರಿಂದ ಮುಖ್ಯವಾಗಿ ಗ್ರಾಮೀಣ ಗೃಹ ಕೈಗಾರಿಕೆಗೆ ಉತ್ತೇಜನ ನೀಡಿದಂತೆ ಆಗುತ್ತದೆ. ಹಿಂದೆ ಮಲೆನಾಡಿನ ಕಪ್ಪೆಗಳು ಸುದ್ದಿ ಮಾಡಿದ್ದವು, ಈಗ ಅಪ್ಪೆ! (ಮಿಡಿ).

ಮಲೆನಾಡಿನ ಹಳೆಯ ಮನೆಗಳಲ್ಲಿ ಇಂದಿಗೂ ಪಿಂಗಾಣಿಯ ಹಳೆಯ ಉಪ್ಪಿನಕಾಯಿ ಜಾಡಿಗಳು ಕೊರಳಲ್ಲಿ ಮಣ್ಣು ಮೆತ್ತಿಕೊಂಡು ಕತ್ತಲು ಕೋಣೆಯಲ್ಲಿ ಇದ್ದದ್ದು ಈಗ ಬೆಳಕಿಗೆ ಬಂದಂತಾಯಿತು. ಊಟಕ್ಕೆ ಹಾಲುಅನ್ನ ಅಥವಾ ಮಜ್ಜಿಗೆಅನ್ನಕ್ಕೆ ಅಪ್ಪೆಮಿಡಿ ಉಪ್ಪಿನಕಾಯಿ ಇದ್ದರೆ ಸಾಕು ಮತ್ತೇನೂ ಬೇಡ! ರುಚಿ ನೋಡದವರು ಒಮ್ಮೆ ತಿಂದು ನೋಡಿ.

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT